2021ರಿಂದ ಈ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗೆ ಸರಕಾರಿ ನೌಕರಿ ಇಲ್ಲ

Update: 2019-10-22 05:53 GMT
 ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌

ಗುವಾಹಟಿ, ಅ.22: ಜನವರಿ 1,2021ರಲ್ಲಿ ಜಾರಿಗೆ ಬರುವಂತೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗೆ ಸರಕಾರಿ ಉದ್ಯೋಗ ನೀಡದಿರಲು ಅಸ್ಸಾಂ ಸಚಿವ ಸಂಪುಟ ಸೋಮವಾರ ನಿರ್ಧರಿಸಿದೆ.

ಸೋಮವಾರ ಸಂಜೆ ನಡೆದ ಸಚಿವ ಸಂಪುಟ  ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜಮೀನಿಲ್ಲದ ಸ್ಥಳೀಯ ಜನರಿಗೆ ಮೂರು ಬಿಗ್ಹಾಸ್‌ನಷ್ಟು ಕೃಷಿ ಭೂಮಿ ಹಾಗೂ ಮನೆ ಕಟ್ಟಲು ಅರ್ಧ ಬಿಘಾ ಭೂಮಿ ನೀಡಲು ನಿರ್ಧರಿಸಲಾಗಿದೆ.

ಜ.1,2021ರಲ್ಲಿ ಜಾರಿಗೆ ಬರಲಿರುವ ಚಿಕ್ಕ ಕುಟುಂಬದ ನಿಯಮ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಯನ್ನು ಸರಕಾರಿ ಉದ್ಯೋಗಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ರ ಸಾರ್ವಜನಿಕ ಸಂಪರ್ಕ ವಿಭಾಗ ತಿಳಿಸಿದೆ.

2017ರ ಸೆಪ್ಟಂಬರ್‌ನಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ‘ಅಸ್ಸಾಂನ ಜನಸಂಖ್ಯೆ ಹಾಗೂ ಮಹಿಳಾ ಸಬಲೀಕರಣ ನಿಯಮ’ದಲ್ಲಿ ಎರಡು ಮಕ್ಕಲಿರುವ ವ್ಯಕ್ತಿ ಮಾತ್ರ ಸರಕಾರಿ ಉದ್ಯೋಗಕ್ಕೆ ಅರ್ಹರು ಎಂದು ಸ್ಪಷ್ಟಪಡಿಸಲಾಗಿದೆ. ಈಗಿರುವ ಸರಕಾರಿ ಉದ್ಯೋಗಿಗಳು ಎರಡು ಮಕ್ಕಳ ಕುಟುಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News