ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ

Update: 2019-10-22 15:31 GMT

ಹೊಸದಿಲ್ಲಿ,ಅ.22: ಚಿದಂಬರಂಗೆ ಜಾಮೀನು ಮಂಜೂರು ಮಾಡಿದರೆ ಅವರು ವಿದೇಶಕ್ಕೆ ಹಾರುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬ ಸಿಬಿಐ ವಾದವನ್ನು ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ತಳ್ಳಿಹಾಕಿದೆ. ಮೇಲ್ಮನವಿದಾರರು ಈಗಾಗಲೇ ತನ್ನ ಪಾಸ್‌ಪೋರ್ಟನ್ನು ನ್ಯಾಯಾಲಯಕ್ಕೆ ಒಪ್ಪಿಸಿರುವಾಗ ಮತ್ತು ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿರುವಾಗ ಅವರು ದೇಶ ಬಿಟ್ಟು ತೆರಳಲು ಹೇಗೆ ಸಾಧ್ಯ ಎಂದು ನ್ಯಾಯಾಧೀಶೆ ಆರ್. ಬಾನುಮತಿ ನೇತೃತ್ವದ ಪೀಠ ಪ್ರಶ್ನಿಸಿದೆ.

ಮಾಜಿ ವಿತ್ತ ಸಚಿವ ಚಿದಂಬರಂ ಪ್ರಕರಣದ 25 ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹಾಗಾಗಿ ಅವರನ್ನು ಜೈಲಿನಲ್ಲಿರಿಸಬೇಕಾದುದು ಅನಿವಾರ್ಯ ಎಂದು ಸಿಬಿಐ ವಾದಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಇದು ಕೊನೆಯ ಗಳಿಗೆಯ ವಾದವಾಗಿದ್ದು ಚಿದಂಬರಂ ಜಾಮೀನು ಮನವಿಯ ವಿರುದ್ಧ ವಾದ ಮಾಡಬೇಕು ಎನ್ನುವುದಕ್ಕಾಗಿ ಮಾತ್ರ ಮಾಡಲಾಗಿದೆ ಎಂದು ನ್ಯಾಯಾಲಯ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News