ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಶ್ರೀಮಂತರ ಪರ: ಕಪಿಲ್ ಸಿಬಲ್

Update: 2019-10-22 14:31 GMT

ಹೊಸದಿಲ್ಲಿ, ಅ. 22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮಂಗಳವಾರ ಟೀಕಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್, ಕೇಂದ್ರ ಸರಕಾರ ಶ್ರೀಮಂತರ ಜೇಬಿಗೆ ಹಣ ಹಾಕುತ್ತಿದೆ. ಆದರೆ, ಬಡವರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ. ಕೇಂದ್ರ ಸರಕಾರ ಶ್ರೀಮಂತ ಜನರ ಪರವಾಗಿ ಇದೆ. ಬಡ ಜನರು ದಿನನಿತ್ಯ ಎದುರಿಸುವ ಸಮಸ್ಯೆಗಳು ಅವರಿಗೆ ಅರ್ಥ ಆಗುತ್ತಿಲ್ಲ ಎಂದು ಅವರು ಹೇಳಿದರು.

18ರಿಂದ 31 ಪ್ರಾಯದ ಗುಂಪಿನ ನಡುವಿನ ಜನರು ಎಂಜಿಎನ್‌ಆರ್‌ಇಜಿಎ ಮೂಲಕ ಕೆಲಸ ಕೋರುತ್ತಿದ್ದಾರೆ. ಇದರ ಅರ್ಥ ಈ ಪ್ರಾಯದ ಗುಂಪಿನ ಜನರು ಉದ್ಯೋಗ ಪಡೆಯುತ್ತಿಲ್ಲ ಎಂಬುದು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ ಎಂದು ಸಿಬಲ್ ತಿಳಿಸಿದ್ದಾರೆ. ‘‘ಕೇಂದ್ರ ಸರಕಾರ ಬಡ ಜನರ ಬಗ್ಗೆ ಚಿಂತಿಸುತ್ತಿಲ್ಲ. ಅದು ಡಿಜಿಟಲ್ ಆರ್ಥಿಕತೆ ಬಗ್ಗೆ ಚಿಂತಿಸುತ್ತಿದೆ. ಅದು ರೈತರ ಬಗ್ಗೆ ಕೂಡ ಚಿಂತಿಸುತ್ತಿಲ್ಲ. ಚಿಲ್ಲರೆ ಬೆಲೆ ಏರಿಕೆಯಾಗಿದೆ. ಆದುದರಿಂದ ಬೆಲೆ ಗಗನಕ್ಕೇರಿದೆ. ಈಗ ಕಡಿಮೆ ಹಣದುಬ್ಬರ ಇದೆ. ಖರೀದಿಸಲು ಜನರಲ್ಲಿ ಹಣವಿಲ್ಲ’’ ಎಂದು ಅವರು ತಿಳಿಸಿದರು. ಮಂಗಳವಾರ ಬೆಳಗ್ಗೆ ಸಿಬಲ್, ‘‘ಅಭಿಜಿತ್ ಬ್ಯಾನರ್ಜಿ ಎಡಕ್ಕೆ ವಾಲುವುದು ಅಪರಾಧವೇ ಎಂದು ನಾನು ಪ್ರಶ್ನಿಸುತ್ತೇನೆ ?’’ ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News