ವಿಶ್ವ ಚಾಂಪಿಯನ್ ಪಿ.ವಿ.ಸಿಂಧುಗೆ ಜಯ

Update: 2019-10-23 02:43 GMT

ಪ್ಯಾರಿಸ್, ಅ.22: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಮಿಚೆಲ್ ಲೀ ವಿರುದ್ಧ ಸುಲಭ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಶುಭಾರಂಭ ಮಾಡಿದರು. ವಿಶ್ವದ ನಂ.6ನೇ ಆಟಗಾರ್ತಿ ಸಿಂಧು ಬುಧವಾರ 44 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಲೀ ವಿರುದ್ಧ 21-15,21-13 ನೇರ ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಸಿಂಧು ಕೆನಡಾ ಆಟಗಾರ್ತಿ ವಿರುದ್ಧ ಆಡಿರುವ 8 ಪಂದ್ಯಗಳಲ್ಲಿ 6ನೇ ಗೆಲುವು ದಾಖಲಿಸಿದರು. ಮುಂದಿನ ಸುತ್ತಿನಲ್ಲಿ ಸಿಂಗಾಪುರದ ವಿಶ್ವದ ನಂ.26ನೇ ಆಟಗಾರ್ತಿ ಜಿಯಾ ಮಿನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News