ಪ್ಯಾರಾಥ್ಲೀಟ್ ಆನಂದನ್‌ಗೆ ಚಿನ್ನ

Update: 2019-10-23 02:45 GMT

ಚೆನ್ನೈ, ಅ.22: ಚೀನಾದ ವುಹಾನ್‌ನಲ್ಲಿ ಮಂಗಳವಾರ ನಡೆದ ಮಿಲಿಟರಿ ವರ್ಲ್ಡ್ ಗೇಮ್ಸ್‌ನ ಪುರುಷರ 100 ಮೀ. ಐಟಿ1 ಇವೆಂಟ್‌ನಲ್ಲಿ ಪ್ಯಾರಾ ಅಥ್ಲೀಟ್ ಆನಂದನ್ ಗುಣಶೇಕರನ್ ಚಿನ್ನದ ನಗೆ ಬೀರಿದ್ದಾರೆ.

ತಮಿಳುನಾಡಿನ ಕುಂಭಕೋಣಂನ 32ರ ಹರೆಯದ ಆನಂದನ್ 12 ಸೆಕೆಂಡ್‌ನಲ್ಲಿ ಗುರಿ ತಲುಪಿ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು. ಪೆರುವಿನ ಕಸಾಸ್ ಜೋಸ್(12.65 ಸೆ.)ಹಾಗೂ ಕೊಲಂಬಿಯಾದ ಫಜಾರ್ಡೊ ಪಾರ್ಡೊ(12.72 ಸೆ.)ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿದ್ದ ಆನಂದನ್ 2008ರ ಜೂನ್‌ನಲ್ಲಿ ಜಮ್ಮುಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಗಡಿನಿಯಂತ್ರಣ ರೇಖೆಯಲ್ಲಿ ದೈನಂದಿನ ಶೋಧಕಾರ್ಯದಲ್ಲಿದ್ದಾಗ ಜೀವಂತ ಮದ್ದುಗುಂಡಿನ ಮೇಲೆ ಕಾಲಿಟ್ಟ ಪರಿಣಾಮ ಎಡಗಾಲನ್ನು ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News