ಪಾಕ್‌ನ ಟಿ-20 ನಾಯಕ ಆಝಂಗೆ ಆಸ್ಟ್ರೇಲಿಯದ ಸವಾಲು

Update: 2019-10-26 06:06 GMT

 ಲಾಹೋರ್, ಅ.25: ಮುಂದಿನ ತಿಂಗಳ ಆಸ್ಟ್ರೇಲಿಯ ಪ್ರವಾಸದಲ್ಲಿ ತನ್ನ ತಂಡ ಕಠಿಣ ಸವಾಲು ಎದುರಿಸಲಿದೆ ಎಂದು ಪಾಕಿಸ್ತಾನದ ನೂತನ ಟ್ವೆಂಟಿ-20 ನಾಯಕ ಬಾಬರ್ ಆಝಂ ಅಭಿಪ್ರಾಯಪಟ್ಟಿದ್ದಾರೆ. ಆಝಂ ಕಳೆದ ವಾರ ಸರ್ಫರಾಝ್ ಅಹ್ಮದ್ ಬದಲಿಗೆ ಪಾಕ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಸ್ವದೇಶದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ 0-3 ಅಂತರದಿಂದ ಪಾಕ್ ತಂಡ ಸೋತ ಹಿನ್ನ್ನೆಲೆಯಲ್ಲಿ ಅಹ್ಮದ್ ನಾಯಕತ್ವ ಕಳೆದುಕೊಂಡಿದ್ದರು. ಅಹ್ಮದ್‌ರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಅಝರ್ ಅಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯನ್ನು ಆಡಲಿದ್ದು, ಸಿಡ್ನಿ(ನ.3), ಕ್ಯಾನ್‌ಬೆರ್ರಾ(ನ.5) ಹಾಗೂ ಪರ್ತ್ (ನ.8)ನಲ್ಲಿ ಪಂದ್ಯಗಳನ್ನು ಆಡಲಿದೆ. 2 ಪಂದ್ಯಗಳ ಟೆಸ್ಟ್ ಸರಣಿಯು ಬ್ರಿಸ್ಬೇನ್(ನ.21-25) ಹಾಗೂ ಅಡಿಲೇಡ್‌ನಲ್ಲಿ(ನ.29-ಡಿ.3)ಆಯೋಜಿಸಲಾಗಿದೆ.

25ರ ಹರೆಯದ ಆಝಂ ಪಾಕಿಸ್ತಾನದ ಅತ್ಯಂತ ಕಿರಿಯ ವಯಸ್ಸಿನ ಟಿ-20 ನಾಯಕನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News