ತನ್ನ ಮೀಸಲು ಚಿನ್ನದ ಒಂದು ಭಾಗ ಮಾರಾಟ ಮಾಡಿದ ರಿಸರ್ವ್ ಬ್ಯಾಂಕ್

Update: 2019-10-26 06:29 GMT

ಮುಂಬೈ: ಬಹಳ ಸಮಯದ ನಂತರ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮೀಸಲು ಚಿನ್ನವನ್ನು ಮಾರಾಟ ಮಾಡುತ್ತಿದೆ. ಜುಲೈಯಲ್ಲಿ ತನ್ನ ಆರ್ಥಿಕ ವ್ಯವಹಾರ ವರ್ಷ ಆರಂಭಗೊಂಡಂದಿನಿಂದ 5.1 ಶತಕೋಟಿ ಬಿಲಿಯನ್ ಮೊತ್ತದ ಚಿನ್ನ ಖರೀದಿಸಿದ್ದ ರಿಸರ್ವ್ ಬ್ಯಾಂಕ್ 1.15 ಶತಕೋಟಿ ಡಾಲರ್ ಮೊತ್ತದ ಚಿನ್ನವನ್ನು ತನ್ನ ಮೀಸಲುಗಳಿಂದ ಮಾರಾಟ ಮಾಡಿದೆ. ಅಕ್ಟೋಬರ್ 11ರಲ್ಲಿದ್ದಂತೆ ದೇಶದ ಫಾರೆಕ್ಸ್ ಮೀಸಲು 26.7 ಶತಕೋಟಿ ಡಾಲರ್ ಆಗಿದೆ.

ಆಗಸ್ಟ್ ಅಂತ್ಯಕ್ಕೆ ರಿಸರ್ವ್ ಬ್ಯಾಂಕ್ ಬಳಿಯಿದ್ದ ಒಟ್ಟು ಚಿನ್ನ 19.87 ಮಿಲಿಯನ್ ಟ್ರಾಯ್ ಔನ್ಸ್ ಆಗಿದೆ. ಸರಿಸುಮಾರು ಇದೇ ಸಂದರ್ಭ ಬಿಮಲ್ ಜಲನ್ ಸಮಿತಿ ವರದಿಯನ್ನು ರಿಸರ್ವ್ ಬ್ಯಾಂಕ್ ಸ್ವೀಕರಿಸಿತ್ತು. ವಿವಿಧ ರಿಸ್ಕ್ ಬಫರ್ ಗಳಿಗೆ ಹಣ ಮೀಸಲಿಟ್ಟ ನಂತರ ಮಿಗತೆ ಹಣವನ್ನು ಸರಕಾರಕ್ಕೆ ವರ್ಗಾವಣೆಗೊಳಿಸಬಹುದೆಂದು ಇದೇ ಸಮಿತಿ ಶಿಫಾರಸು ಮಾಡಿತ್ತು. ಈ ವರದಿ ಸ್ವೀಕರಿಸಿದ ನಂತರ ರಿಸರ್ವ್ ಬ್ಯಾಂಕ್ ಚಿನ್ನದ ಟ್ರೇಡಿಂಗ್‍ನಲ್ಲಿ ತನ್ನನ್ನು ಹೆಚ್ಚು ತೊಡಗಿಸಿದೆಯೆಂಬುದು ಅಂಕಿ ಅಂಶಗಳಿಂದ ತಿಳಿಯುತ್ತಿದೆ. ತನ್ನ ಟ್ರೆಶರಿ ಆಪರೇಶನ್ಸ್ ಭಾಗವಾಗಿ ಕರೆನ್ಸಿ ಟ್ರೇಡಿಂಗ್ ನಂತೆ ರಿಸರ್ವ್ ಬ್ಯಾಂಕ್ ಚಿನ್ನದ ಟ್ರೇಡಿಂಗ್ ನಲ್ಲಿ ತೊಡಗಿಕೊಂಡಿದೆಯೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News