ಪಿಂಚಣಿ, ವಿಮೆ ದ್ವಿಗುಣಗೊಳಿಸಲು ಆಟಗಾರರ ಸಂಘಟನೆ ಆಗ್ರಹ

Update: 2019-10-29 04:34 GMT

ಹೊಸದಿಲ್ಲಿ, ಅ.28: ಭಾರತೀಯ ಕ್ರಿಕೆಟಿಗರ ಸಂಘಟನೆ (ಐಸಿಎ) ಆಟಗಾರರಿಗೆ ನೀಡುವ ಸವಲತ್ತು ಯೋಜನೆಗಳನ್ನು ಮರುಪರಿಶೀಲಿಸುವಂತೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದ್ದು, ಪಿಂಚಣಿ ಮತ್ತು ವಿಮೆಯನ್ನು ದ್ವಿಗುಣಗೊಳಿಸುವಂತೆ ಆಗ್ರಹಿಸಿದೆ.

 ಐಸಿಎಯ ಪುರುಷ ಮತ್ತು ಮಹಿಳಾ ಆಟಗಾರರ ಪ್ರತಿನಿಧಿಗಳಾದ ಅಂಶುಮಾನ್ ಗಾಯಕ್‌ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಬಿಸಿಸಿಐ ಪ್ರಸ್ತುತ ಸಮಯಕ್ಕೆ ಅನುಗುಣವಾಗಿ ಲಾಭದಾಯಕ ಯೋಜನೆಗಳನ್ನು ರೂಪಿಸಿದ ಸಮಯವಾಗಿದೆ ಎಂದು ಹೇಳಿದರು. ಸೌರವ್ ಗಂಗುಲಿ ನೇತೃತ್ವದ ಬಿಸಿಸಿಐಗೆ ಐಸಿಎ ಪ್ರಸ್ತಾಪವು ಒಂದು ಸವಾಲಾಗಿದೆೆ ಎಂದರು.

ಪಿಂಚಣಿ ನಿಬಂಧನೆಗಳನ್ನು ಒಳಗೊಂಡಂತೆ ಪ್ರಯೋಜನ ಯೋಜನೆಗಳ ಪರಿಷ್ಕರಣೆ ನಮ್ಮ ಮುಖ್ಯ ಬೇಡಿಕೆಯಾಗಿದೆ. ಅವುಗಳು ಪ್ರಸ್ತುತ ಸಮಯಕ್ಕೆ ಅನುಗುಣವಾಗಿರಬೇಕು ಎಂದು ಗಾಯಕ್‌ವಾಡ್ ಮುಂಬೈ ಮಿರರ್‌ಗೆ ತಿಳಿಸಿದರು. ನಾವು ಅನೌಪಚಾರಿಕ ಚರ್ಚೆಗಳನ್ನು ನಡೆಸಿದ್ದೇವೆ. ಕೆಲವು ವಿಚಾರಗಳಿವೆ, ಆದರೆ ನಾವು ವಿಷಯಗಳಿಗೆ ಸಂಬಂಧಿಸಿ ಆತುರ ತೋರಲು ಬಯಸುವುದಿಲ್ಲ. ನಾವು ಅದನ್ನು ನಿಧಾನವಾಗಿ ಮತ್ತು ಹಂತ ಹಂತವಾಗಿ ಮಾಡಲು ಬಯಸುತ್ತೇವೆ. ಆರಂಭದಲ್ಲಿ, ಪಿಂಚಣಿ ಮತ್ತು ವಿಮೆಯನ್ನು ಪರಿಷ್ಕರಿಸಬೇಕೆಂದು ನಾವು ಬಯಸುತ್ತೇವೆ. ಪಂದ್ಯಗಳನ್ನು ಆಡಿರುವ ಸಂಖ್ಯೆಯನ್ನು ಆಧರಿಸಿ ಭಾರತದ ಪುರುಷ ಕ್ರಿಕೆಟಿಗರಿಗೆ ಮಾಸಿಕ 10,000 ರಿಂದ 50,000 ರೂ. ಮಂಡಳಿಯು ಪ್ರತಿ ಆಟಗಾರನಿಗೆ 5 ಲಕ್ಷ ರೂ. ವಿಮೆಯನ್ನು ನೀಡಬೇಕು ಎಂದು ಹೇಳಿದ್ದಾರೆ.

 ನಮ್ಮದು ಆಟಗಾರರ ಅನುಕೂಲಕ್ಕಾಗಿರುವ ಸಂಘಟನೆಯಾಗಿದೆ ಎಂದು ಅವರು ಹೇಳಿದರು. ನಾವು ನವೆಂಬರ್ 1 ಮತ್ತು 2 ರಂದು ಭೇಟಿಯಾಗುತ್ತೇವೆ ಮತ್ತು ಕಚೇರಿಯ ಸ್ಥಳವನ್ನು ಅಂತಿಮಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News