ಭಾರತ-ಸೌದಿ ನಡುವೆ ಈಗ ಆಯಕಟ್ಟಿನ ಭಾಗೀದಾರಿಕೆ: ಮೋದಿ

Update: 2019-10-29 14:41 GMT

ರಿಯಾದ್, ಅ. 29: ಭಾರತ ಮತ್ತು ಸೌದಿ ಅರೇಬಿಯ ನಡುವಿನ ಗ್ರಾಹಕ-ಮಾರಾಟಗಾರ ಸಂಬಂಧವು ಮುಂದುವರಿದು ನಿಕಟ ಆಯಕಟ್ಟಿನ ಭಾಗೀದಾರಿಕೆ ಮಟ್ಟವನ್ನು ತಲುಪಿದೆ ಹಾಗೂ ಸೌದಿ ಅರೇಬಿಯವು ಭಾರತದಲ್ಲಿನ ತೈಲ ಮತ್ತು ಅನಿಲ ಯೋಜನೆಗಳಲ್ಲಿ ಬಂಡವಾಳ ಹೂಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  ಇರಾಕ್ ಬಳಿಕ ಸೌದಿ ಅರೇಬಿಯ ಭಾರತದ ಅತಿ ದೊಡ್ಡ ಕಚ್ಚಾತೈಲ ಪೂರೈಕೆದಾರ ದೇಶವಾಗಿದೆ. ಅದು 2018-19ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ 4.03 ಕೋಟಿ ಟನ್ ಕಚ್ಚಾತೈಲವನ್ನು ಮಾರಾಟ ಮಾಡಿದೆ. ಈ ಅವಧಿಯಲ್ಲಿ ಭಾರತವು ಒಟ್ಟು 20.73 ಕೋಟಿ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ.

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಸುಮಾರು 18 ಶೇಕಡವನ್ನು ಸೌದಿ ಅರೇಬಿಯದಿಂದ ಆಮದು ಮಾಡಿಕೊಳ್ಳುತ್ತದೆ ಎಂದು ‘ಅರಬ್ ನ್ಯೂಸ್’ ಪತ್ರಿಕೆಯಲ್ಲಿ ಮಂಗಳವಾರ ಪ್ರಕಟಗೊಂಡ ಸಂದರ್ಶನದಲ್ಲಿ ಪ್ರಧಾನಿ ಹೇಳಿದರು.

ಪ್ರಮುಖ ಹಣಕಾಸು ಸಮ್ಮೇಳನದಲ್ಲಿ ಭಾಗವಹಿಸಲು ಹಾಗೂ ಉನ್ನತ ಸೌದಿ ನಾಯಕತ್ವದೊಂದಿಗೆ ಮಾತುಕತೆ ನಡೆಸಲು ಮೋದಿ ಸೋಮವಾರ ರಾಜಧಾನಿ ರಿಯಾದ್‌ಗೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News