ಇಸ್ಲಾಮ್‌ನ ಚಿತ್ರಣವನ್ನು ವಿರೂಪಗೊಳಿಸಿದ್ದ ಬಗ್ದಾದಿ: ಸೌದಿ

Update: 2019-10-29 17:14 GMT

ರಿಯಾದ್ (ಸೌದಿ ಅರೇಬಿಯ), ಅ. 29: ಭಯೋತ್ಪಾದಕ ಗುಂಪು ಐಸಿಸ್‌ನ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಇಸ್ಲಾಮ್‌ನ ಚಿತ್ರಣವನ್ನು ತಿರುಚಿದ್ದನು ಎಂದು ಹೇಳಿರುವ ಸೌದಿ ಅರೇಬಿಯ, ಅವನ ಸಾವಿನಿಂದ ಒಳ್ಳೆಯದಾಗಿದೆ ಎಂದು ಹೇಳಿದೆ.

‘‘ಇಸ್ಲಾಮ್‌ನ ನೈಜ ಚಿತ್ರಣವನ್ನು ವಿರೂಪಗೊಳಿಸಿದ ಹಾಗೂ ದೌರ್ಜನ್ಯ ಮತ್ತು ಅಪರಾಧಗಳನ್ನು ನಡೆಸಿದ ಭಯೋತ್ಪಾದಕ ಸಂಘಟನೆಯ ಸದಸ್ಯರ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸೌದಿ ಅರೇಬಿಯ ಶ್ಲಾಘಿಸುತ್ತದೆ’’ ಎಂದು ಸೌದಿ ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ಅಮೆರಿಕ ಸೇನೆ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಮೃತಪಟ್ಟಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News