ಈಡನ್ ಗಾರ್ಡನ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ನ ಟಿಕೆಟ್ ರೂ. 50ಕ್ಕೂ ಲಭ್ಯ !

Update: 2019-10-29 17:53 GMT

ಕೋಲ್ಕತಾ, ಅ.29: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಬಹು ನಿರೀಕ್ಷಿತ ಹಗಲು-ರಾತ್ರಿ ಟೆಸ್ಟ್ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುವುದಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಮಂಗಳವಾರ ಹೇಳಿದ್ದಾರೆ. ಸಿಎಬಿ 68,000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣವನ್ನು ಭರ್ತಿ ಮಾಡಲು ಯೋಜನೆ ರೂಪಿಸಿದ್ದು, ಕನಿಷ್ಠ 50 ರೂ.ಗೆ ಟಿಕೆಟ್ ಲಭ್ಯವಿದೆ.

ಭಾರತ ಮತ್ತು ಬಾಂಗ್ಲಾದೇಶ ನವೆಂಬರ್ 22 ರಿಂದ 26 ರವರೆಗೆ ಈಡನ್ ಗಾರ್ಡನ್‌ನಲ್ಲಿ ತಮ್ಮ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಲಿದೆ. ವಾತಾವರಣ ಮತ್ತು ಪ್ರೇಕ್ಷಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಾಹ್ನ 1 ಅಥವಾ ಮಧ್ಯಾಹ್ನ 1:30ಕ್ಕೆ ಟೆಸ್ಟ್ ಪಂದ್ಯವನ್ನು ಆರಂಭಿಸಲು ಬಿಸಿಸಿಐನ ಅನುಮತಿ ಪಡೆಯುವುದಾಗಿ ಆತಿಥೇಯ ಸಿಎಬಿ ಹೇಳಿದೆ.

ಮಧ್ಯಾಹ್ನ 1:30ಕ್ಕೆ ಆರಂಭವಾಗಿ ರಾತ್ರಿ 8: 30ರ ಹೊತ್ತಿಗೆ ಪಂದ್ಯ ಮುಗಿಯುತ್ತದೆ ಮತ್ತು ಪ್ರೇಕ್ಷಕರು ಬೇಗನೆ ಮನೆಗೆ ಮರಳುತ್ತಾರೆ ಎಂದು ಸಿಎಬಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಪಿಟಿಐಗೆ ತಿಳಿಸಿದರು. ಪ್ರತಿದಿನ ಟಿಕೆಟ್ ದರ 50, 100, 150 ರೂ. ಆಗಿರುತ್ತವೆ. ಸಾಧ್ಯವಾದಷ್ಟು ಜನಸಮೂಹವನ್ನು ಸೆಳೆಯಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಇದು ಯಶಸ್ವಿಯಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಡಾಲ್ಮಿಯಾ ಹೇಳಿದರು.

ಸಾಂಪ್ರದಾಯಿಕ ಟೆಸ್ಟ್‌ಗಳಂತಲ್ಲದೆ, ಡೇ-ನೈಟ್ ಟೆಸ್ಟ್‌ನಲ್ಲಿ ಮೊದಲ ವಿರಾಮವು 20 ನಿಮಿಷಗಳ ಚಹಾ ವಿರಾಮ ಮತ್ತು ನಂತರ 40 ನಿಮಿಷಗಳ ರಾತ್ರಿ ಊಟದ ವಿರಾಮವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News