ಕೆಎಸ್ಸಾರ್ಟಿಸಿಗೆ ಮತ್ತೊಂದು ಗರಿ: 2 ಮಿಲಿಯನ್ ಕ್ಲಬ್ ಗೆ ಸೇರ್ಪಡೆಗೊಂಡ ವೋಲ್ವೋ ಬಸ್ ಗಳು

Update: 2019-10-30 07:13 GMT

ಬೆಂಗಳೂರು, ಅ.30: ಉತ್ತಮ ಸಾರಿಗೆ ನಿರ್ವಹಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಕೆಎಸ್ಸಾರ್ಟಿಸಿಗೆ ಮತ್ತೊಂದು ಜಾಗತಿಕ‌ ಮನ್ನಣೆ ದೊರೆತಿದೆ. ನಿಗಮದ ವೋಲ್ವೋ ಬಸ್ಸುಗಳು ಯಾವುದೇ ಪ್ರಮುಖ ದುರಸ್ತಿ ಇಲ್ಲದೆ 20 ಲಕ್ಷ ಕ್ರಮಿಸಿ , 2 ಮಿಲಿಯನ್ ಕ್ಲಬ್ ಗೆ ಸೇರ್ಪಡೆಗೊಂಡಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು "ಅಂತರ-ರಾಜ್ಯ ಮತ್ತು ರಾಜ್ಯದೊಳಗೆ ಕಾರ್ಯಾಚರಣೆಗೊಳಿಸುತ್ತಿರುವ

ವೋಲ್ವೋ ಬಸ್‌ಗಳು ಹೆಚ್ಚಿನ ಮೈಲೇಜ್ ಮತ್ತು ತಡೆರಹಿತ 20 ಲಕ್ಷ ಕಿಲೋಮೀಟರ್ ಬಸ್ ಕಾರ್ಯಾಚರಣೆಗೊಳಿಸಿರುವುದಕ್ಕಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದೆ.

ಬ್ರೂಸಲ್ಸ್ ನಲ್ಲಿ ಜರುಗಿದ 21ನೇ ಅಂತಾರಾಷ್ಟ್ರೀಯ ಪಬ್ಲಿಕ್ ಸಾರಿಗೆ ಸಮ್ಮೇಳನ ಹಾಗೂ ಬಸ್ಸುಗಳ ಪ್ರದರ್ಶನದಲ್ಲಿ ವೋಲ್ವೋ ಬಸ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಹಕನ್ ಅಗ್ನೆವಾಲ್ ಅವರು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಬೆಂಗಳೂರು ಕೇಂದ್ರೀಯ ವಿಭಾಗದ ಒಂದು ಮಲ್ಟಿ ಆಕ್ಸಲ್ ವೋಲ್ವೋ ವಾಹನ  ಮತ್ತು  ಒಂದು ಸಿಂಗಲ್ ಆಕ್ಸಲ್ ವೋಲ್ವೋ ವಾಹನಗಳು ಯಾವುದೇ ಪ್ರಮುಖ ತೊಂದರೆ, ದುರಸ್ತಿ ಇಲ್ಲದೆ ಒಟ್ಟು 20 ಲಕ್ಷ ಕಿ.ಮೀ. ಕ್ರಮಿಸಿದೆ ಮತ್ತು ಇತರ 13 ವಾಹನಗಳು 18 ಲಕ್ಷ ಕಿ.ಮೀ ಕ್ರಮಿಸಿದ್ದು, ದೂರದ ಮಾರ್ಗಗಳಲ್ಲಿ ಇನ್ನೂ ಸಹ ಕಾರ್ಯಚರಣೆ ನಡೆಸುತ್ತಿದೆ.

ಮಂಗಳೂರು ವಿಭಾಗದಲ್ಲಿ ಒಂದು ವೋಲ್ವೋ ಬಸ್ 21.5 ಲಕ್ಷ ಕಿ.ಮೀ ಕ್ರಮಿಸಿದೆ ಮತ್ತು ಇತರ 14 ವೋಲ್ವೋ ಬಸ್ಸುಗಳು 18 ಲಕ್ಷ ಕಿ.ಮೀ ಕ್ರಮಿಸಿದ್ದು, ಮೈಸೂರು ಗ್ರಾಮಾಂತರ ವಿಭಾಗದ ನಾಲ್ಕು ವೋಲ್ವೋ ಬಸ್ಸುಗಳು 19 ಲಕ್ಷ ಕಿ.ಮೀ ಕ್ರಮಿಸುತ್ತಿವೆ. ಇದಕ್ಕೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೆಚ್ಚುಗೆ ವ್ಯಕ್ಯಪಡಿಸಿದ್ದು, ನಮ್ಮ ಚಾಲಕರು, ಮೆಕ್ಯಾನಿಕ್ಸ್ ಮತ್ತು ಅಧಿಕಾರಿಗಳು ಅತ್ತ್ಯುತ್ತಮ ನಿರ್ವಹಣೆ ಹಾಗೂ ಚಾಲನಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News