ಲಾರಿ ಅಡಿ ಸಿಲುಕಿ ಸಾವನ್ನಪ್ಪಿದ ಚಾಲಕ: ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆ
Update: 2019-10-30 18:37 IST
ಬೆಂಗಳೂರು, ಅ.30: ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿದ್ದ ಚಾಲಕನ ಮೃತದೇಹ ನಾಲ್ಕು ದಿನಗಳ ಬಳಿಕ ಪತ್ತೆಯಾದ ಘಟನೆ ವೈಟ್‌ಫೀಲ್ಡ್‌ನ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತನನ್ನು ಬಾಗಲಕೋಟೆ ಮೂಲದ ಹನುಮಂತ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹನುಮಂತ, ಕಳೆದ ಅ.25ರಂದು ಸಂಜೆ ತಾನು ಕೊಂಡೊಯ್ಯಬೇಕಾದ ಕಂಟೇನರ್ ನಂಬರ್ ನೋಡಲು ತೆರಳಿದ್ದನು. ಹನುಮಂತ ನಿಂತಿದ್ದ ಜಾಗದಲ್ಲೇ ಮತ್ತೊಬ್ಬ ಚಾಲಕ ಕಂಟೇನರ್ ಇಳಿಸಿದ್ದಾನೆ. ಸಿಬ್ಬಂದಿಗೆ ಹನುಮಂತ ಕಂಟೇನರ್ ಅಡಿ ಸಿಲುಕಿರುವುದು ಅರಿವಿಗೆ ಬಂದಿರಲಿಲ್ಲ. ಪರಿಣಾಮ ಅದರಡಿ ಸಿಲುಕಿ ಹನುಮಂತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ನಾಲ್ಕು ದಿನಗಳ ಬಳಿಕ ಮತ್ತೊಬ್ಬ ಸಿಬ್ಬಂದಿ ಕಂಟೇನರ್ ತೆಗೆದ ವೇಳೆ ಹನುಮಂತನ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.