"ಇಸ್ರೇಲಿ ಸ್ಪೈವೇರ್ ಮೂಲಕ ಸರಕಾರ, ಬಿಜೆಪಿ ಬೇಹುಗಾರಿಕೆ ನಡೆಸಿದ್ದರೆ...": ಪ್ರಿಯಾಂಕಾ ಗಾಂಧಿ ವಾಗ್ದಾಳಿ

Update: 2019-11-01 08:51 GMT

ಹೊಸದಿಲ್ಲಿ, ನ.1: "ಪತ್ರಕರ್ತರು, ವಕೀಲರು, ಸಾಮಾಜಿಕ ಹೋರಾಟಗಾರರು ಹಾಗೂ ರಾಜಕಾರಣಿಗಳ ಮೇಲೆ ಅವರ ಫೋನುಗಳಲ್ಲಿ ಸ್ಪೈವೇರ್ ಅಳವಡಿಸಲು ಇಸ್ರೇಲಿ ಏಜೆನ್ಸಿಗಳನ್ನು ಬಿಜೆಪಿ ಅಥವಾ ಸರಕಾರ ಬಳಸಿದ್ದಲ್ಲಿ ಅದು ಮಾನವ ಹಕ್ಕುಗಳ ಉಲ್ಲಂಘನೆಯ ಜತೆಗೆ `ಹಗರಣ'ವಾಗುತ್ತದೆ. ದೇಶದ ಭದ್ರತೆ ವಿಚಾರದಲ್ಲಿ ಗಂಭೀರ ಪರಿಣಾಮಗಳಿಗೂ ಕಾರಣವಾಗಲಿದೆ'' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ಭಾರತದ ಹಲವು ಪತ್ರಕರ್ತರು ಹಾಗೂ ಮಾನವ ಹಕ್ಕು ಕಾರ್ಯಕರ್ತರ  ಮೇಲೆ ನಿಗಾ ಇಡಲಾಗಿತ್ತೆಂಬ ಅಂಶವನ್ನು ವಾಟ್ಸ್ಯಾಪ್ ಬಹಿರಂಗಗೊಳಿಸಿದ ಬೆನ್ನಲ್ಲಿ ಪ್ರಿಯಾಂಕ ಅವರ ಹೇಳಿಕೆ ಬಂದಿದೆ. ತಾವು ಸರಕಾರದ ಪ್ರತಿಕ್ರಿಯೆಗಾಗಿ ಕಾದಿರುವುದಾಗಿಯೂ ಪ್ರಿಯಾಂಕಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯೊಂದಿಗೆ ಈ ಪ್ರಕರಣದ ತನಿಖೆ ನಡೆಸಬೇಕೆಂದು ವಿಪಕ್ಷ ಕಾಂಗ್ರೆಸ್ ಈಗಾಗಲೇ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News