ಬಿಜೆಪಿಯು ಮೊಘಲರಂತೆ ಬೆದರಿಸುತ್ತಿದೆ: ಶಿವಸೇನೆ

Update: 2019-11-02 07:45 GMT

ಮುಂಬೈ, ನ.2: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಸರಕಾರ ರಚನೆ ಕುರಿತು ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ನಾಯಕ ಹಾಗೂ ರಾಜ್ಯ ವಿತ್ತ ಸಚಿವ ಸುಧೀರ್ ಮುಂಗಂತಿವರ್  ಹೇಳಿದ್ದಾರೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯ ಈ ಬೆದರಿಕೆ ಮೊಘಲರ ಆಳ್ವಿಕೆ ಕಾಲದ ಆದೇಶದಂತಿದೆ ಎಂದು 'ಸಾಮ್ನಾ'ದ ಸಂಪಾದಕೀಯದಲ್ಲಿ ಹೇಳಿದೆ.

"ಇದು ಮೊಘಲರ ಆದೇಶದಂತಿದೆ. ಕಾನೂನು ಮತ್ತು ಸಂವಿಧಾನ ಯಾರದ್ದೇ ಗುಲಾಮರಲ್ಲ. ಮಹಾರಾಷ್ಟ್ರ ರಾಜಕೀಯದಲ್ಲಿನ ಈಗಿನ ಪರಿಸ್ಥಿತಿಗೆ ನಾವು  ಹೊಣೆಯಲ್ಲ ಎಂಬುದು ಮಹಾರಾಷ್ಟ್ರದ ಜನತೆಗೆ ಗೊತ್ತು. ಕಾನೂನು ಮತ್ತು ಸಂವಿಧಾನವೇನು ಎಂಬುದೂ ನಮಗೆ ಗೊತ್ತು'' ಎಂದು ಶಿವಸೇನೆ ಸಾಮ್ನಾದಲ್ಲಿ ಹೇಳಿಕೊಂಡಿದೆ.

ರಾಷ್ಟ್ರಪತಿ ಆಳ್ವಿಕೆ ಹೇರುವ ಬೆದರಿಕೆ  ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ವಿರುದ್ಧವಾಗಿದೆ ಎಂದು ಹೇಳಿದ ಶಿವಸೇನೆ ಸರಕಾರ ರಚನೆಯಲ್ಲಿನ ವಿಳಂಬಕ್ಕೆ ಬಿಜೆಪಿಯನ್ನು ದೂರಿದೆ.

"ಬಿಜೆಪಿಯವರೇ ಮುಂದಿನ ಸಿಎಂ ಎಂದು ಹೇಳಿಕೊಂಡವರು ಸರಕಾರ ರಚನೆಗೆ ಹಕ್ಕು ಮಂಡಿಸಿಲ್ಲವೇಕೆ?, ಇದಕ್ಕೆ ಮಹಾರಾಷ್ಟ್ರದ ಜನತೆಯನ್ನು ಹೊಣೆಯಾಗಿಸಲಾಗುವುದೇ?, ಬಹುಮತ ಪಡೆಯದವರು ಈಗ ರಾಷ್ಟ್ರಪತಿ ಆಳ್ವಿಕೆಯ ಬೆದರಿಕೆ ಹಾಕುತ್ತಿದಾರೆ'' ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News