‘ಟೈಮ್ಸ್ ಆಫ್ ಇಂಡಿಯಾ’ ಆರಂಭ

Update: 2019-11-02 18:29 GMT

1838: ವಿಶ್ವಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣ ಹೊಂದಿರುವ ದಿನಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ ಆರಂಭವಾಯಿತು. ಆ ಸಮಯದಲ್ಲಿ ದಿಲ್ಲಿಯಲ್ಲಿ ಬಹದ್ದೂರ್ ಷಾ ಜಾಫರ್ ಆಡಳಿತವಿತ್ತು. ‘ದ ಬಾಂಬೆ ಟೈಮ್ಸ್ ಆ್ಯಂಡ್ ಜರ್ನಲ್ ಆಫ್ ಕಾಮರ್ಸ್’ ಎಂಬ ಹೆಸರಿನಿಂದ ಆರಂಭಗೊಂಡ ಈ ಪತ್ರಿಕೆಯು ಪ್ರತೀ ಶನಿವಾರ ಮತ್ತು ಬುಧವಾರ ಮಾತ್ರ ಪ್ರಕಟಗೊಳ್ಳುತ್ತಿತ್ತು. ಅಂದು ಜೆ.ಇ. ಬ್ರೆನನ್ ಎಂಬವರು ಈ ಪತ್ರಿಕೆಯ ಮಾಲಕ ಹಾಗೂ ಸಂಪಾದಕರಾಗಿದ್ದರು.

1850ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಎಂಬ ಹೆಸರು ಪಡೆದು ದಿನಪತ್ರಿಕೆಯಾಗಿ ರೂಪಾಂತರಗೊಂಡಿತು.

1493: ಖ್ಯಾತ ಶೋಧಕ ಕ್ರಿಸ್ಟೋಫರ್ ಕೊಲಂಬಸ್ ಡೊಮಿನಿಕಾ ದ್ವೀಪ ಪ್ರದೇಶವನ್ನು ಕಂಡುಹಿಡಿದನು.

1793: ಫ್ರೆಂಚ್ ನಾಟಕಗಾರ್ತಿ, ಪತ್ರಕರ್ತೆ, ಮಹಿಳಾವಾದಿ, ಕ್ರಾಂತಿಕಾರಿ ಒಲಿಂಪೆ ಡಿ ಗೌಗ್ಸ್ ಅವರನ್ನು ಗಿಲೋಟಿನ್ ಯಂತ್ರದಿಂದ ಹತ್ಯೆ ಮಾಡಲಾಯಿತು.

1867: ಫ್ರೆಂಚ್ ಮತ್ತು ಪೋಪ್‌ನ ಸೈನ್ಯವು ಸಂಯುಕ್ತವಾಗಿ ಇಟಲಿಯ ಜೋಸೆಫ್ ಗ್ಯಾರಿಬಾಲ್ಡಿ ನೇತೃತ್ವದ ಸೈನ್ಯವನ್ನು ಸೋಲಿಸಿತು.

1903: ಪನಾಮಾ ಕೊಲಂಬಿಯದಿಂದ ಸ್ವಾತಂತ್ರ್ಯ ಪಡೆಯಿತು.

1954: ಜರ್ಮನಿಯ ಇಬ್ಬರು ಭೌತ ವಿಜ್ಞಾನಿಗಳಾದ ವಾಲ್ಟರ್ ಬೋಥ್ ಹಾಗೂ ಮ್ಯಾಕ್ಸ್ ಬಾರ್ನ್ ಭೌತಶಾಸ್ತ್ರದ ನೊಬೆಲ್ ಹಂಚಿಕೊಂಡರು.

1970: ಮಾರ್ಕ್ಸ್‌ವಾದಿ ಸ್ಯಾಲ್ವಡಾರ್ ಅಲ್ಲೆಂಡ್ ಚಿಲಿ ಅಧ್ಯಕ್ಷರಾಗಿ ಆಯ್ಕೆಯಾದರು.

1984: ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕೇವಲ ಮೂರು ದಿನದಲ್ಲಿ 3,000 ಜನರು ಹತ್ಯೆಗೀಡಾದರು.

2014: ವಿಜ್ಞಾನಿಗಳ ಎಚ್ಚರಿಕೆಯ ಬಳಿಕ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹವಾಗುಣ ಬದಲಾವಣೆಯ ಬಗ್ಗೆ ವಿಶ್ವವ್ಯಾಪಿ ಕ್ರಮಕ್ಕೆ ಕರೆಕೊಟ್ಟರು.

1901: ಭಾರತೀಯ ರಂಗಭೂಮಿ ಹಾಗೂ ಬಾಲಿವುಡ್‌ನ ಖ್ಯಾತ ನಟ ಪೃಥ್ವಿರಾಜ್ ಕಪೂರ್‌ಜನ್ಮದಿನ.

1933: ಖ್ಯಾತ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ.ಅಮರ್ತ್ಯ ಕುಮಾರ್ ಸೇನ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ