ಎರಡನೇ ಟ್ವೆಂಟಿ-20 ಪಂದ್ಯ: ಭಾರತದ ಗೆಲುವಿಗೆ 154 ರನ್ ಸವಾಲು

Update: 2019-11-07 15:43 GMT

ರಾಜ್‌ಕೋಟ್, ನ.7: ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಗೆಲುವು ದಾಖಲಿಸಿದ ಪ್ರವಾಸಿ ಬಾಂಗ್ಲಾದೇಶ ಎರಡನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 153ರನ್ ಗಳಿಸಿದೆ.

   ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡಕ್ಕೆ ಭಾರತದ ಗೆಲುವಿಗೆ ಕಠಿಣ ಸವಾಲು ವಿಧಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಯಾರಿಂದಲೂ ಅರ್ಧಶತಕದ ಕೊಡುಗೆ ಲಭ್ಯವಾಗಲಿಲ್ಲ.

ಚಂಡಮಾರುತದ ಪರಿಣಾಮವಾಗಿ ಮಳೆಯ ಬೆದರಿಕೆ ಪಂದ್ಯಕ್ಕಿದ್ದರೂ ಬಾಂಗ್ಲಾದ ಬ್ಯಾಟಿಂಗ್‌ಗೆ ಅಡ್ಡಿಯಾಗಲಿಲ್ಲ. ಮುಹಮ್ಮದ್ ನಯೀಮ್(36) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲಿಟನ್ ದಾಸ್ ಮತ್ತು ನಯೀಮ್ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 60 ರನ್ ಸೇರಿಸಿದರು. ಲಿಟನ್ ದಾಸ್ 21 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 29 ರನ್ ಗಳಿಸಿ ಔಟಾದರು.

ನಯೀಮ್ 10.3ನೇ ಓವರ್‌ನಲ್ಲಿ ವಾಶಿಂಗ್ಟನ್ ಸುಂದರ್ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮೊದಲು ನಯೀಮ್ 36 ರನ್ (31ಎ, 5ಬೌ) ಗಳಿಸಿದರು.

 ಕಳೆದ ಪಂದ್ಯದ ಹೀರೊ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಶ್ಫೀಕುರ್ರಹೀಮ್ ಅವರಿಗೆ ಚಹಾಲ್ ಹೆಚ್ಚು  ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಲಿಲ್ಲ. ಅವರು ಕೇವಲ 4 ರನ್ ಗಳಿಸಿ

 ದರು. ಸೌಮ್ಯ ಸರ್ಕಾರ್ 30 ರನ್ (20ಎ, 2ಬೌ,1ಸಿ) ಗಳಿಸಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ವುುಹಮ್ಮದುಲ್ಲಾ 30 ರನ್(21ಎ, 4ಬೌ), ಆಫಿಫ್ ಹುಸೈನ್ 6 ರನ್ ಗಳಿಸಿ ಔಟಾದರು.

ಮೊಸಾದೆಕ್ ಹುಸೈನ್ ಮತ್ತು ಆಮಿನುಲ್ ಇಸ್ಲಾಂ ಔಟಾಗದೆ ತಲಾ 6 ರನ್‌ಗಳ ಕೊಡುಗೆ ನೀಡಿದರು. ಬಾಂಗ್ಲಾ ತಂಡದ ಪರ 16 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಗಿತ್ತು. ಸೌಮ್ಯ ಸರ್ಕಾರ್ ಏಕೈಕ ಸಿಕ್ಸರ್ ಸಿಡಿಸಿದರು.

 ಭಾರತದ ಯಜುವೇಂದ್ರ ಚಹಾಲ್ 28ಕ್ಕೆ 2 ವಿಕೆಟ್, ದೀಪಕ್ ಚಹಾರ್, ಖಲೀಲ್ ಅಹ್ಮದ್ ಮತ್ತು ವಾಶಿಂಗ್ಟನ್ ಸುಂದರ್ ತಲಾ 1 ವಿಕೆಟ್ ಹಂಚಿಕೊಂಡರು. ಶಿವಮ್ ದುಬೆ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ಓವರ್‌ಗಳ ಬೌಲಿಂಗ್ ಮಾಡಿದ್ದರೂ ವಿಕೆ್ ಪಡೆಯದೆ ಕೈ ಸುಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News