ಕೃಷಿ ವಿವಿಯಲ್ಲಿ ಅಕ್ರಮ ಪ್ರವೇಶಾತಿ: ಮಾಜಿ ಕುಲಪತಿ ಪುತ್ರ ವಿನಯ್ ಪಾಟೀಲ್‌ಗೆ ನೋಟಿಸ್

Update: 2019-11-07 17:32 GMT

ಬೆಂಗಳೂರು, ನ.7: ರಾಯಚೂರು ಕೃಷಿ ವಿಜ್ಞಾನಗಳ ವಿವಿಯ ಕುಲಪತಿಯಾಗಿದ್ದ ಬಿ.ವಿ.ಪಾಟೀಲ್ ಅವರ ಮಗ ಹಾಗೂ ವಿವಿಯ ಪ್ರಾಧ್ಯಾಪಕರ ಮಕ್ಕಳು ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಿ.ವಿ.ಪಾಟೀಲ್ ಅವರ ಮಗ ಹಾಗೂ ವಿವಿಯ ಪ್ರಾಧ್ಯಾಪಕರ ಮಕ್ಕಳು ಕೃಷಿಕರ ಕೋಟಾದಡಿ ಪ್ರವೇಶಾತಿಯಲ್ಲಿ ಅಕ್ರಮ ನಡೆಸಿದ್ದಾರೆಯೇ, ನಕಲಿ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಲು ಕೃಷಿ ವಿವಿಗೆ ನ್ಯಾಯಪೀಠವು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ. ವಿನಯ್ ಪಾಟೀಲ್ , ಸೌಮ್ಯ, ಕೃಷ್ಣ ದೇಸಾಯಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News