ಲೈಂಗಿಕ ಕಿರುಕುಳ ಆರೋಪ: ಆಟೊ ಚಾಲಕನ ಬಂಧನ

Update: 2019-11-08 12:45 GMT

ಬೆಂಗಳೂರು, ನ.8: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆಟೊ ಚಾಲಕನನ್ನು ಇಲ್ಲಿನ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಮಲ್ಲೇಶ್ವರಂ ನಿವಾಸಿ ಚಂದ್ರು ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನ.2ರಂದು ಶೇಷಾದ್ರಿಪುರಂ ಖಾಸಗಿ ಹೊಟೇಲ್‌ನಿಂದ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ಯುವತಿಯರು, ಆಟೊ ಮೂಲಕ ಇಲ್ಲಿನ ಬಿಟಿಎಂ ಲೇಔಟ್ ತಮ್ಮ ನಿವಾಸಕ್ಕೆ ಬಿಡುವಂತೆ ಚಂದ್ರುಗೆ ತಿಳಿಸಿದ್ದರು. ಆದರೆ, ಆರೋಪಿ ಚಂದ್ರು, ಬಿಟಿಎಂ ಲೇಔಟ್ ಹೋಗದೆ, ಯಶವಂತಪುರ ಮಾರ್ಕೆಟ್ ಕಡೆಗೆ ಕರೆದು ಕೊಂಡು ಹೋಗುತ್ತಿದ್ದ, ಇದನ್ನು ಪ್ರಶ್ನಿಸಿದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು, ಆರೋಪಿ ಚಂದ್ರು ಅನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News