ತೀರ್ಪಿಗೆ ಗೌರವ ನೀಡೋಣ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Update: 2019-11-09 08:01 GMT

ಬೆಂಗಳೂರು, ನ.9: ಅಯೋಧ್ಯ ವಿವಾದ ಬಗೆಹರಿಸುವಲ್ಲಿ ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ನಾವೆಲ್ಲ ಅತ್ಯಂತ ಗೌರವದಿಂದ ಮಾನ್ಯ ಮಾಡೋಣ. ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕರೆ ಹೇಳಿದ್ದಾರೆ.

ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಪವಿತ್ರ ಸ್ಥಾನವಿದೆ, ಅದರಂತೆ ಅಯೋಧ್ಯ ವಿಚಾರವಾಗಿಯೂ ಸುಪ್ರೀಂ ಕೋರ್ಟ್ ತೀರಾ  ವಿವೇಚನೆಯಿಂದ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಎಲ್ಲಾ ಧರ್ಮಿಯರು ಸರ್ವಸಮ್ಮತವಾಗಿ ಈ ತೀರ್ಪನ್ನು ಸ್ವೀಕರಿಸುವ ಮೂಲಕ ಸಮಾಜದಲ್ಲಿಯ ಶಾಂತಿ ಸೌಹಾರ್ದ  ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News