ಡೇ-ನೈಟ್ ಟೆಸ್ಟ್: ಮೊದಲ 3 ದಿನದಲ್ಲಿ 50,000 ಪ್ರೇಕ್ಷಕರ ನಿರೀಕ್ಷೆ

Update: 2019-11-09 18:41 GMT

ಕೋಲ್ಕತಾ, ನ.9: ಬಾಂಗ್ಲಾದೇಶ ವಿರುದ್ಧ ನ.22ರಿಂದ 26ರ ತನಕ ಭಾರತ ಮೊದಲ ಬಾರಿ ಆಡಲಿರುವ ಡೇ-ನೈಟ್ ಟೆಸ್ಟ್‌ನ ಮೊದಲ 3 ದಿನಗಳಲ್ಲಿ 50,000ಕ್ಕೂ ಅಧಿಕ ಪ್ರೇಕ್ಷಕರು ಹಾಜರಾಗುವ ನಿರೀಕ್ಷೆಯಿದೆ.

ಈಡನ್‌ಗಾರ್ಡನ್ಸ್‌ನಲ್ಲಿ ಭಾರತ ಮೊದಲ ಬಾರಿ ಪಿಂಕ್ ಬಾಲ್‌ನಲ್ಲಿ ಡೇ-ನೈಟ್ ಟೆಸ್ಟ್ ಆಡಲಿದ್ದು, ಪಂದ್ಯದ ಮೊದಲ 3 ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಟ್ವೀಟ್ ಮಾಡಿದೆ. 50 ಸಾವಿರ ಟಿಕೆಟ್‌ಗಳ ಪೈಕಿ ಸುಮಾರು 17,000 ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ. ಉಳಿದವುಗಳನ್ನು ಮಾನ್ಯತೆಯಿರುವ ಸದಸ್ಯರುಗಳಿಗೆ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News