ಭಾರತ ಮೂಲದ ದೀರ್ಘಾವಧಿ ಸಂಸದ ಕೀತ್ ವಾಝ್ ರಾಜೀನಾಮೆ

Update: 2019-11-11 17:34 GMT

ಲಂಡನ್, ನ. 11: ಬ್ರಿಟನ್ ಸಂಸತ್‌ನಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಭಾರತ ಮೂಲದ ಬ್ರಿಟಿಶ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೀತ್ ವಾಝ್ ರವಿವಾರ ರಾಜೀನಾಮೆ ನೀಡಿದ್ದಾರೆ.

ಸಂಸತ್ತಿನ ಭಾಗವಾಗಿರುವ ಹೌಸ್ ಆಫ್ ಕಾಮನ್ಸ್‌ನ ಪ್ರತಿಷ್ಠೆ ಮತ್ತು ಪ್ರಾಮಾಣಿಕತೆಗೆ ಹಾನಿಯೆಸಗಿರುವ ಆರೋಪ ಅವರ ವಿರುದ್ಧ ಹೊರಿಸಿದ ದಿನಗಳ ಬಳಿಕ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

2016ರ ಡ್ರಗ್ಸ್ ಮತ್ತು ಸೆಕ್ಸ್ ವಿವಾದದಲ್ಲಿ ಅವರು ವಹಿಸಿರುವ ಪಾತ್ರಕ್ಕಾಗಿ ಅವರನ್ನು ಆರು ತಿಂಗಳು ಅಮಾನತುಗೊಳಿಸಬೇಕು ಎಂಬುದಾಗಿ ಕಾಮನ್ಸ್ ಗುಣಮಟ್ಟ ಸಮಿತಿಯು ಶಿಫಾರಸು ಮಾಡಿತ್ತು.

ಡಿಸೆಂಬರ್ 12ರ ಸಂಸತ್ ಚುನಾವಣೆಯಲ್ಲಿ ಅವರ ಲೇಬರ್ ಪಕ್ಷವು ಮುಜುಗರಕ್ಕೀಡಾಗಿರುವುದನ್ನು ತಪ್ಪಿಸಲು ಅವರು ರಾಜೀನಾಮೆ ನೀಡಿದ್ದಾರೆ.

ಗೋವಾ ಮೂಲದವರಾಗಿರುವ 62 ವರ್ಷದ ವಾಝ್ ಬ್ರಿಟನ್‌ನ ಭಾರತೀಯ ಸಮುದಾಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಮೊದಲ ಬಾರಿ 1987ರಲ್ಲಿ ಸಂಸತ್‌ಗೆ ಆಯ್ಕೆಯಾದ ಅವರು ಬಳಿಕ 8 ಚುನಾವಣೆಗಳಲ್ಲಿ ಜಯ ಗಳಿಸಿದರು. ಅವರು ಲೀಸೆಸ್ಟರ್ ಈಸ್ಟ್ ಕ್ಷೇತ್ರವನ್ನು 32 ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News