ಫುಟ್ಬಾಲ್ ಆಟಗಾರನಾಗಿ ಬದಲಾದ ಶಾಕೀಬ್

Update: 2019-11-11 19:06 GMT

ಢಾಕಾ, ನ.11: ಐಸಿಸಿಯಿಂದ ಅಮಾನತುಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಅವರು ಫುಟ್ಬಾಲ್ ಆಟಗಾರನಾಗಿ ಬದಲಾಗಿದ್ದಾರೆ. ಶಾಕೀಬ್ ಅವರು ಫೂಟಿ ಹ್ಯಾಗ್ಸ್ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಬಾಂಗ್ಲಾದೇಶ ಆರ್ಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊರಿಯನ್ ಎಕ್ಸ್ ಪ್ಯಾಟ್ ವಿರುದ್ಧ ಶಾಕಿಬ್ ಅಲ್ ಹಸನ್ ಸದಸ್ಯರಾಗಿರುವ ಪೂಟಿ ಹ್ಯಾಗ್ಸ್ ತಂಡ 3-2 ಅಂತರದಲ್ಲಿ ಜಯ ಗಳಿಸಿದೆ. ಶಾಕಿಬ್ ತಂಡದೊಂದಿಗಿರುವ ಫೋಟೊವನ್ನು ಫೂಟಿ ಹ್ಯಾಗ್ಸ್ ಟ್ವೀಟ್ ಮಾಡಿದೆ. ಬುಕ್ಕಿ ಸಂಪರ್ಕಿಸಿರುವುದನ್ನು ಮಾಹಿತಿ ನೀಡದ ಆರೋಪದಲ್ಲಿ ಶಾಕೀಬ್ ಅವರನ್ನು ಐಸಿಸಿ ಎರಡು ವರ್ಷಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. ಕ್ರಿಕೆಟ್‌ನಲ್ಲಿ ಇನ್ನು ಎರಡು ವರ್ಷಗಳ ಕಾಲ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಶಾಕಿಬ್ ಇದೀಗ ಫುಟ್ಬಾಲ್ ಕಡೆಗೆ ಗಮನ ಹರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News