ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೇರರಿವಾಲನ್ ಪರೋಲ್ ನಲ್ಲಿ ಬಿಡುಗಡೆ

Update: 2019-11-12 06:51 GMT

ಚೆನ್ನೈ, ನ.12: ತಂದೆಯ ಆರೋಗ್ಯದ ಕಾರಣಕ್ಕಾಗಿ  ಮಾಜಿ ಪ್ರಧಾನಿ  ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಆರೋಪಿ ಎ.ಜಿ . ಪೇರರಿವಾಲನ್ ಎಂಬಾತನನ್ನು ವೆಲ್ಲೂರು ಕೇಂದ್ರ ಕಾರಾಗೃಹದಿಂದ 30 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಪೇರರಿವಾಲನ್ ಅಲಿಯಾಸ್ ಅರಿವು 1991 ರಿಂದ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

"ಪೇರರಿವಾಲನ್ ಅವರಿಗೆ ಅನಾರೋಗ್ಯ ಪೀಡಿತ ತಂದೆಗೆ ನೋಡಿಕೊಳ್ಳಲು  ಒಂದು ತಿಂಗಳು ಪರೋಲ್ ನೀಡಲಾಗಿದೆ ಎಂದು ರಾಜ್ಯದ ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ 76 ವರ್ಷದ ತಂದೆ ಜ್ಞಾನಶೇಖರನ್ ಅವರ ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ಆರೋಪಿ ನೀಡಿದ ಮನವಿಯನ್ನು ಪುರಸ್ಕರಿಸಿ 1982ರ ತಮಿಳುನಾಡು ಸಸ್ಪೆನ್ಷನ್ ಆಫ್ ಸೆಂಟೆನ್ಸ್ ರೂಲ್ಸ್ ಪ್ರಕಾರ ಜೈಲು ಇಲಾಖೆಯಿಂದ ಪರೋಲ್ ನೀಡಲಾಗಿದೆ ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News