ಈ ದಿನ

Update: 2023-06-30 05:29 GMT

1864: ಗ್ರೀಸ್ ದೇಶವು ಹೊಸ ಸಂವಿಧಾನವನ್ನು ಅಳವಡಿಸಿಕೊಂಡಿತು.

1902: ಖ್ಯಾತ ಕಾದಂಬರಿಕಾರ ಜೋಸೆಫ್ ಕಾರ್ನಾಡ್‌ರ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯ ಪ್ರಥಮ ಸಂಪುಟವು ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ವಿಲಿಯಮ್ ಬ್ಲಾಕ್‌ವುಡ್ ಎಂಬವರಿಂದ ಪ್ರಕಟಗೊಂಡಿತು.

1909: ಅಮೆರಿಕದ ಇಲಿನಾಯ್ಸನ ಚೆರ್ರಿ ಎಂಬಲ್ಲಿ ಸೈಂಟ್ ಪಾಲ್ ಗಣಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 259 ಜನರು ಅಸುನೀಗಿದರು.

1922 : ಅಮೆರಿಕದ ನ್ಯೂಯಾರ್ಕ್ ಸಮೀಪದ ಹರ್ಲೆಮ್ ಎಂಬಲ್ಲಿ ಕಪ್ಪು ಜನಾಂಗದವರಿಂದ ಸಾಮಾಜಿಕ, ಕಲಾ ಕ್ರಾಂತಿಗೆ ಕಾರಣವಾದ ವಿಶ್ವವಿಖ್ಯಾತ ‘ಹರ್ಲೆಮ್ ಪುನರುತ್ಥಾನ’ ಆರಂಭವಾಯಿತು.

1946: ಪ್ರಥಮ ಬಾರಿಗೆ ಮೆಸಾಚುಸೆಟ್ಸ್‌ನ ಗ್ರೆಲಾಕ್ ಪರ್ವತದಲ್ಲಿ ಸ್ವಾಭಾವಿಕ ಮೋಡಗಳಿಂದ ಕೃತಕ ಹಿಮವನ್ನು ಸೃಷ್ಟಿಸಲಾಯಿತು.

1960: ಸ್ಪೇನ್‌ನ ಅಮ್ಯುಡ್ ಎಂಬಲ್ಲಿ ಚಿತ್ರಮಂದಿರವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ 152 ಮಕ್ಕಳು ಅಸುನೀಗಿದರು.

1985: ಕೊಲಂಬಿಯಾದಲ್ಲಿ ನೆವಾಡೊ ಡೆಲ್ ರ್ಯೂಝ್ ಹೆಸರಿನ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಪರಿಣಾಮ 25,000 ಜನರು ಅಸುನೀಗಿದರು.

1986: ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಇರಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡರು.

2010: ನೊಬೆಲ್ ಪುರಸ್ಕೃತೆ, ಲೇಖಕಿ, ಮ್ಯಾನ್ಮಾರ್‌ನ ರಾಜಕಾರಣಿ ಆಂಗ್ ಸಾನ್ ಸೂ ಕಿ ಸುಮಾರು 21 ವರ್ಷಗಳ ನಂತರ ಗೃಹ ಬಂಧನದಿಂದ ಬಿಡುಗಡೆಯಾದರು.

2013: ನಾಲ್ಕನೇ ವಿಶ್ವ ವಾಣಿಜ್ಯ ಕೇಂದ್ರ ಅಧಿಕೃತವಾಗಿ ತೆರೆಯಿತು.

2014: ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 264 ರನ್ ಬಾರಿಸುವ ಮೂಲಕ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೊಸ ವಿಶ್ವದಾಖಲೆ ನಿರ್ಮಿಸಿದರು.

1967 : ಹಿಂದಿ ಚಿತ್ರನಟಿ ಜೂಹಿ ಚಾವ್ಲಾ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ