ಅಫ್ಘಾನಿಸ್ತಾನ ವಿರುದ್ಧ ಚೆಂಡು ವಿರೂಪ ಪ್ರಕರಣ: ಪೂರನ್ ಅಮಾನತು

Update: 2019-11-14 02:04 GMT

ದುಬೈ, ನ.13: ಅಫ್ಘಾನಿಸ್ತಾನ ವಿರುದ್ಧ ಸೋಮವಾರ ಲಕ್ನೊದಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿರುವ ವೆಸ್ ್ಟಇಂಡೀಸ್ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ನಿಕೊಲಸ್ ಪೂರನ್ ನಾಲ್ಕು ಪಂದ್ಯಗಳಿಂದ ಅಮಾನತಾಗಿದ್ದಾರೆ. ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡಿರುವ ಪೂರನ್ ವೆಸ್ಟ್‌ಇಂಡೀಸ್ ಆಡಲಿರುವ ಮುಂದಿನ ನಾಲ್ಕು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ದಾಖಲೆಗೆ ಐದು ಡಿಮೆರಿಟ್ ಪಾಯಿಂಟ್‌ಗಳು ಸೇರ್ಪಡೆಯಾಗಿವೆ.

ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗಿರುವ ಐಸಿಸಿ ನೀತಿ ಸಂಹಿತೆ ಲೆವೆಲ್-3ನ್ನು ಉಲ್ಲಂಘಿಸಿರುವುದಾಗಿ ನಿಕೊಲಸ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ಕು ಅಮಾನತು ಅಂಕವನ್ನು ನೀಡಲಾಗಿದೆ. ಚೆಂಡಿನ ರೂಪವನ್ನು ಬದಲಾಯಿಸಿರುವುದಕ್ಕೆ ಸಂಬಂಧಿಸಿ ಆರ್ಟಿಕಲ್ ಸಂಹಿತೆ 2.14ನ್ನು ಉಲ್ಲಂಘಿಸಿರುವ ಪೂರನ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೂರನ್ ತನ್ನ ಹೆಬ್ಬೆರಳ ಉಗುರಿನಲ್ಲಿ ಚೆಂಡಿನ ಮೇಲ್ಮೈಯನ್ನು ಉಜ್ಜು ತ್ತಿರುವುದು ವೀಡಿಯೊ ಫೂಟೇಜ್‌ನಲ್ಲಿ ಕಂಡುಬಂದಿದೆ.

ಪೂರನ್ ಮಂಗಳವಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್‌ರ ಪ್ರಸ್ತಾವಿತ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ‘‘ನಾನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿರುವೆ. ಸಂಪೂರ್ಣವಾಗಿ ಐಸಿಸಿ ಪೆನಾಲ್ಟಿಯನ್ನು ಸ್ವೀಕರಿಸುವೆ. ಇಂತಹ ಘಟನೆ ಮರುಕಳಿಸದು ಎಂದು ಪ್ರತಿಯೊಬ್ಬರಿಗೂ ಭರವಸೆ ನೀಡುವೆ. ನನ್ನ ಸಹ ಆಟಗಾರರು, ಬೆಂಬಲಿಗರು ಹಾಗೂ ಅಫ್ಘಾನಿಸ್ತಾನ ತಂಡದ ಬಳಿ ಕ್ಷಮೆಯಾಚಿಸುವೆ’’ ಎಂದು ಪೂರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News