ಗೃಹ ಸಚಿವಾಲಯದ ಈ ನಿಲುವಿಗೆ ಪೊಲೀಸ್ ಅಧಿಕಾರಿಗಳ ತೀವ್ರ ಆಕ್ಷೇಪ

Update: 2019-11-14 11:12 GMT

ಹೊಸದಿಲ್ಲಿ, ನ.14: ಐಪಿಎಸ್ ಅಸೋಸಿಯೇಶನ್ ರಚಿಸಲು ಕೇಂದ್ರ ಸರಕಾರದ ಅನುಮತಿಯಿಲ್ಲದೇ ಇರುವುದರಿಂದ ಅದೊಂದು ಅಕ್ರಮ ಸಂಸ್ಥೆಯಾಗಿದೆ ಎಂದು ಗೃಹ ಸಚಿವಾಲಯ ತಾಳಿರುವ ನಿಲುವಿಗೆ ಪೊಲೀಸ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವಾಲಯದ ನಿಲುವು ಅದರ ಅಧಿಕಾರಿಗಳು ತಾಳಿರುವ ಪಕ್ಷಪಾತ ಧೋರಣೆಯನ್ನು ಸೂಚಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಸರಕಾರದ ಅನುಮತಿಯಿಲ್ಲದೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಸಂಘಟನೆ ಸ್ಥಾಪಿಸಲು ಅನುಮತಿಯಿಲ್ಲವೆಂದು 2018ರಲ್ಲಿ  ಸಲ್ಲಿಸಲಾಗಿದ್ದ ಆರ್‍ ಟಿಐ ಅರ್ಜಿಗೆ ಉತ್ತರವಾಗಿ ಕೇಂದ್ರ ಗೃಹ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ಹೇಳಿತ್ತು.

"ಆದರೆ ಐಪಿಎಸ್ ಅಸೋಸಿಯೇಶನ್ ದಶಕಗಳ ಕಾಲ ಯಾವುದೇ ವಿವಾದಕ್ಕೀಡಾಗದೆ ಕಾರ್ಯಾಚರಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದು ಇದೀಗ ಗೃಹ ಸಚಿವಾಲಯಕ್ಕೆ ದಿಢೀರನೇ ಪೊಲೀಸ್ ಪಡೆಗಳ (ಅಧಿಕಾರ ನಿರ್ಬಂಧಿಸುವ) ಕಾಯಿದೆ 1966  ಇದರ ನೆನಪು ಹೇಗಾಯಿತು?'' ಎಂದೂ ಅವರು ಪ್ರಶ್ನಿಸಿದ್ದಾರೆ.

ಗೃಹ ಸಚಿವಾಲಯದ ಬಳಿ ಐಪಿಎಸ್ ಅಸೋಸಿಯೇಶನ್ ಅಸ್ತಿತ್ವದ ಕುರಿತು ದಾಖಲೆಗಳು ಅಥವಾ ಮಾಹಿತಿಯಿದೆಯೇ  ಹಾಗೂ ಅದು ಸರಕಾರದಿಂದ ಮಾನ್ಯತೆ ಪಡೆದಿದೆಯೇ ಎಂದು 2018ರಲ್ಲಿ ನೂತನ್ ಠಾಕುರ್ ಎಂಬವರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಯಲ್ಲಿ ಕೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News