ಹಾಂಕಾಂಗ್‌ನಲ್ಲಿ ಕರ್ಫ್ಯೂ ಎನ್ನುವ ಟ್ವೀಟನ್ನು ತೆಗೆದ ಚೀನಿ ಪತ್ರಿಕೆ

Update: 2019-11-14 17:03 GMT

ಬೀಜೀಂಗ್, ನ. 14: ಹಾಂಕಾಂಗ್ ಸರಕಾರವು ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸಲಿದೆ ಎಂಬುದಾಗಿ ಚೀನಾದ ಸರಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಗುರುವಾರ ಟ್ವೀಟ್ ಮಾಡಿದೆ. ಆದರೆ, ಅದನ್ನು ಅರ್ಧ ಗಂಟೆಯಲ್ಲಿಯೇ ತೆಗೆಯಲಾಗಿದೆ.

‘‘ಎಚ್‌ಕೆಎಸ್‌ಎಆರ್ ಸರಕಾರ ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸುವ ನಿರೀಕ್ಷೆಯಿದೆ’’ ಎಂದು ಪತ್ರಿಕೆಯು ತನ್ನ ಟ್ವಿಟರ್ ಖಾತೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪೋಸ್ಟೊಂದನ್ನು ಹಾಕಿತ್ತು. ಈ ಸುದ್ದಿಗೆ ಅದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿತ್ತು. ಆದರೆ, ಅದನ್ನು ಶೀಘ್ರವೇ ತೆಗೆಯಲಾಯಿತು.

ಸಾಕಷ್ಟು ಪ್ರಮಾಣದಲ್ಲಿ ಮಾಹಿತಿಯ ಮೂಲ ಇಲ್ಲದಿರುವುದರಿಂದ ಟ್ವೀಟನ್ನು ತೆಗೆಯುವಂತೆ ನಾನೇ ಹೇಳಿದ್ದೇನೆ ಎಂದು ಬಳಿಕ ಪತ್ರಿಕೆಯ ಸಂಪಾದಕ ಹು ಕ್ಸಿಜಿನ್ ಟ್ವೀಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News