ಟಿವಿ ಸಂವಾದದಲ್ಲಿ ಮಾನಹಾನಿಕರ ಹೇಳಿಕೆ: ಅಯೋಧ್ಯೆ ಸಂತನ ಬಂಧನ

Update: 2019-11-14 17:22 GMT

 ಅಯೋಧ್ಯೆ, ನ. 14: ರಾಮಜನ್ಮಭೂಮಿ ನ್ಯಾಸದ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ವಿರುದ್ಧ ಟಿ.ವಿ. ವಾಹಿನಿಯಲ್ಲಿ ಕೆಲವು ತೀವ್ರ ಮಾನ ಹಾನಿಕರ ಹೇಳಿಕೆ ನೀಡಿದ ಮಹಾಂತ ಪರಮಹಂಸದಾಸ್ ಅವರನ್ನು ಗುರುವಾರ ಬಂಧಿಸಲಾಗಿದೆ.

ಕಮಲ್ ನಯನ್ ದಾಸ್ ಅವರ ನಿಯೋಜಿತ ಉತ್ತರಾಧಿಕಾರಿ ನೃತ್ಯ ಗೋಪಾಲ್ ದಾಸ್ ಅವರ ಶಿಷ್ಯ ಆನಂದ್ ದಾಸ್ ಅವರು, ಪರಮಾನಂದ ದಾಸ್ ಅಜ್ಞಾನಿ ಹಾಗೂ ಮೂರ್ಖ ಎಂದು ಹೇಳಿದ್ದಾರೆ.

 ಟಿ.ವಿ. ವಾಹಿನಿಯಲ್ಲಿ ಪರಮಹಂಸದಾಸರ ಹೇಳಿಕೆ ಅಸಭ್ಯ ಹಾಗೂ ಅಜ್ಞಾನದಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

 ಪರಮಹಂಸದಾಸ್ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನೃತ್ಯ ಗೋಪಾಲ್ ದಾಸ್ ಬೆಂಬಲಿಗರು ಪರಮಹಂಸದಾಸ್ ನಿವಾಸದ ಹೊರಗೆ ಸೇರಿದರು. ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಕೈಮೀರಿ ಹೋಗುವುದಕ್ಕಿಂತ ಮುನ್ನ ಪರಮಹಂಸದಾಸ್ ಅವರನ್ನು ಬಂಧಿಸಿದರು.

ಅಯೋಧ್ಯೆಯಲ್ಲಿ ಶೀಘ್ರದಲ್ಲಿ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದರೆ, ಅತ್ಮಾಹುತಿ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಪರಮಹಂಸದಾಸ್ ಅವರನ್ನು ಬಂಧಿಸಿಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News