ಟಿಪ್ಪುವಿನ ಬಗ್ಗೆ ಒಂದಿಷ್ಟು...!

Update: 2019-11-14 18:29 GMT

ಮಹಾತ್ಮಾ ಗಾಂಧಿ ಹತ್ಯೆಗೆ ಪರೋಕ್ಷವಾಗಿ ಪ್ರೇರಣೆ ನೀಡಿದ ವ್ಯಕ್ತಿಗೆ ಇಂದಿನ ಸರಕಾರ ‘ಭಾರತ ರತ್ನ’ ಉಪಾಧಿ ನೀಡಲು ಮುಂದಾಗಿದೆ. ಕರ್ನಾಟಕದ-ಮೈಸೂರಿನ ಘನತೆಯನ್ನು ಕಾಪಾಡಲು ವೀರ ಮರಣವನ್ನಪ್ಪಿದ್ದ ಟಿಪ್ಪುವಿನ ತೇಜೋವಧೆ ಮಾಡಲು ಹಿಂದೂ ಮೂಲಭೂತವಾದಿಗಳು ಹುನ್ನಾರ ನಡೆಸುತ್ತಿದ್ದಾರೆ. ಚರಿತ್ರೆಯನ್ನು ಓದದವರು, ಓದಿಯೂ ತಿಳಿಯಲು ಅನರ್ಹರಾದ ಕುಬ್ಜ ರಾಜಕಾರಣಿಗಳು ಇಂದು ಸರ್ವಜ್ಞರಾಗಿ ಮೆರೆಯುತ್ತಿದ್ದಾರೆ. ಅವರ ಭಟ್ಟಂಗಿಗಳೂ ಅದಕ್ಕೆ ತಕಥೈ ಕುಣಿಯುತ್ತಿದ್ದಾರೆ. ಮಹಾತ್ಮಾ ಗಾಂಧಿಯ ಹತ್ಯೆ ಮಾಡಿದ ಗೋಡ್ಸೆಗೆ ಮಂದಿರ. ಅಂತೆಯೇ ಹತ್ಯೆಗೆ ಪಿತೂರಿ ಮಾಡಿದ ವ್ಯಕ್ತಿಗೆ ‘ಭಾರತ ರತ್ನ’! ಭಾರತ ರತ್ನ ಉಪಾಧಿಯೇ...ನೀನೆಷ್ಟು ನತದೃಷ್ಟ?

Fools rush in where the angels fear to tread.
-ದೇವತೆಗಳು ಹೋಗಲು ಹಿಂಜರಿಯುವ ಸ್ಥಳಕ್ಕೆ ಮೂರ್ಖರು ಧಾವಿಸುತ್ತಾರೆ. ಇದು ತತ್ವಜ್ಞಾನಿಯೊಬ್ಬನ ಉದ್ಗಾರ.
ಪುರಾತನ ಗ್ರೀಸ್ ದೇಶದಲ್ಲಿ ಒಬ್ಬ ತತ್ವಜ್ಞಾನಿ ಅವನ ಹೆಸರು ಡಿಯೋಜನಿಕ್. ಹಗಲಿನಲ್ಲಿ ಕೈಯಲ್ಲಿ ಉರಿಯುವ ದೀವಟಿಗೆಯನ್ನು ಹಿಡಿದು ಅಥೆನ್ಸ್ ನಗರದ ಬೀದಿಗಳಲ್ಲಿ ಓಡಾಡುತ್ತಿದ್ದಾನೆ. ಜನರು ಕುತೂಹಲದಿಂದ ಕೇಳಿದಾಗ ಅವನ ಉತ್ತರ: ನಾನು ಪ್ರಾಮಾಣಿಕ ನಾಗರಿಕರನ್ನು ಹುಡುಕಲು ಓಡಾಡುತ್ತಿದ್ದೇನೆ. ಆದರೆ ಇಷ್ಟರವರೆಗೆ ಯಾರೂ ಸಿಗಲಿಲ್ಲ.
ಪ್ರಾಮಾಣಿಕತೆ ಎನ್ನುವುದು ಹಿಂದಿನ ಕಾಲದಲ್ಲಿಯೂ ಬಿಸಿಲುಗುದುರೆ. ಇಂದಿಗೂ ಅದೇ ಮೃಗಜಲ. ಇದು ಅನುಕೂಲಕ್ಕೆ ಅಂಟಿದ ಅಭಿಶಾಪ.
ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಜನರು ಅದನ್ನು ಸತ್ಯವೆಂದೇ ನಂಬುತ್ತಾರೆ. ಇದು ಹಿಟ್ಲರ್‌ನ ಆಪ್ತ ಗೋಬೆಲ್ ಹೇಳಿದ ಮಾತು. ಹಾಗಾಗಿ ಸತ್ಯವನ್ನು ಮುಚ್ಚಿಡಲು ಸುಳ್ಳು ಬ್ರಹ್ಮಾಸ್ತ್ರವೂ ಹೌದು. ಓ ನನ್ನ ಬಾಂಧವರೇ ನಿಮಗೆ ಟಿಪ್ಪುವಿನ ಬಗ್ಗೆ ಸ್ವಲ್ಪವಾದರೂ ತಿಳಿಯಬೇಕೆನ್ನುವ ಮುಕ್ತ ಮನಸ್ಸಿದ್ದರೆ ಪೂರ್ವಾಗ್ರಹ ದೋಷದ ಕಾಮಾಲೆ ಕಣ್ಣಿನಿಂದ ಮುಕ್ತರಾಗಿ ಈ ಕೆಳಗೆ ನಮೂದಿಸಿದ ಪುಸ್ತಕವನ್ನು ಓದುವಿರಾ?
SECRET CORRESPONDENCE OF TIPPU SULTAN by KABIR KAUSAR

ಆದರೂ ಸತ್ಯ ಸತ್ಯವೇ. ಸತ್ಯ ಅವಿನಾಶಿ.
 ಸಚ್ಚಾಯಿ ಚುಪ್ ನಹಿ ಸಕ್ತೀ ಬನಾವಟ್ ಕೀ ಉಸುಲೋಂಸೆ
ಖುಷ್ಬೂ ಆ ನಹೀ ಸಕ್ತೀ ಕಭೀ ಕಾಗಜ್ ಕೀ ಫೂಲೋಂಸೆ
-ಸತ್ಯವು ಸುಳ್ಳಿನ ಅವಕುಂಠನದಿಂದ ಮುಚ್ಚಿಡಲು ಸಾಧ್ಯವಿಲ್ಲ. ಕಾಗದದ ಹೂವಿನಲ್ಲಿ ಸುವಾಸನೆಯು ಹೊರಸೂಸಲು ಸಾಧ್ಯವಿಲ್ಲ. ‘‘ಸತ್ಯಮೇವ ಜಯತೆ’’ ಇದು ಪುರಾತನ ಋಷಿವಂದ್ಯರ ಪಾಂಚಜನ್ಯ. ಅದು ನೆನಪಾಗಲೆಂದು ಆಶಿಸೋಣ.
-ಗೋಪಾಲ ಬಿ. ಶೆಟ್ಟಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News