ಜೆಫ್ ಬೆಝೋಸ್ ಹಿಂದಿಕ್ಕಿ ಮತ್ತೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬಿಲ್ ಗೇಟ್ಸ್

Update: 2019-11-16 09:13 GMT

ನ್ಯೂಯಾರ್ಕ್: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಪಡೆದುಕೊಂಡಿದ್ದು ಈ ಮೂಲಕ ಅವರು ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಅಮೆಝಾನ್ ಮುಖ್ಯಸ್ಥ ಜೆಫ್ ಬೆಝೋಸ್ ಅವರನ್ನು ಹಿಂದಿಕ್ಕಿದ್ದಾರೆ.

ಅಮೆಝಾನ್  ಕಂಪೆನಿಯ ಬದಲು ಮೈಕ್ರೋಸಾಫ್ಟ್ ಸಂಸ್ಥೆಗೆ ಪೆಂಟಗಾನ್ ಅಕ್ಟೋಬರ್ 25ರಂದು 10 ಬಿಲಿಯನ್ ಡಾಲರ್ ಮೊತ್ತದ ಕ್ಲೌಡ್ ಕಂಪ್ಯೂಟಿಂಗ್ ಗುತ್ತಿಗೆ ನೀಡಲು ತೀರ್ಮಾನಿಸಿರುವುದೂ ಬಿಲ್ ಗೇಟ್ಸ್  ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮತ್ತೆ ಗುರುತಿಸಿಕೊಳ್ಳಲು ಕಾರಣವಾಗಿದ್ದಿರಬಹುದು. ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ  ಮೈಕ್ರೋಸಾಫ್ಟ್ ಷೇರುಗಳ ಮೌಲ್ಯ ಶೇ 4ರಷ್ಟು ಏರಿಕೆ ಕಂಡಿದ್ದೇ ಬಿಲ್ ಗೇಟ್ಸ್ ಒಟ್ಟು ಸಂಪತ್ತಿನ ಮೌಲ್ಯ 110 ಬಿಲಿಯನ್ ಡಾಲರ್ ತಲುಪಲು ಕಾರಣವಾಗಿದೆ.

ಅತ್ತ ಅಮೆಝಾನ್ ಸಂಸ್ಥೆಯ ಷೇರು ಮೌಲ್ಯ ಶೇ. 2ರಷ್ಟು ಕುಸಿದು ಬೆಝೋಸ್ ಅವರ ಒಟ್ಟು ಸಂಪತ್ತು 108.7 ಬಿಲಿಯನ್ ಡಾಲರ್  ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News