ಇಂದೋರ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಧೂಳಿಪಟ: ಭಾರತಕ್ಕೆ ಸರಣಿಯಲ್ಲಿ 1-0 ಮುನ್ನಡೆ

Update: 2019-11-16 10:42 GMT
Photo: Twitter(@BCCI)

ಇಂದೋರ(ಮ.ಪ್ರ),ನ.16: ಇಂದೋರ್ ಟೆಸ್ಟ್ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶವನ್ನು ಒಂದು ಇನಿಂಗ್ಸ್ ಮತ್ತು 130 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ. 

ಚಹಾ ವಿರಾಮದ ವೇಳೆಗೆ ಭಾರತವು ಗೆಲುವಿನ ಜಯಭೇರಿ ಬಾರಿಸಿದ್ದು, ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಅವರ ಅಜೇಯ ಅರ್ಧಶತಕದಾಟ ವ್ಯರ್ಥವಾಗಿದೆ.

ದ್ವಿತೀಯ ಟೆಸ್ಟ್ ಹಗಲು-ರಾತ್ರಿ ಪಂದ್ಯವಾಗಿದ್ದು,ನ.22ರಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News