ನಗರ ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳಿ: ಸಿಆರ್‌ಪಿಎಫ್ ಗೆ ಅಮಿತ್ ಶಾ

Update: 2019-11-16 11:43 GMT

ಹೊಸದಿಲ್ಲಿ: ಮಾವೋವಾವದಿಗಳ ವಿರುದ್ಧ ಪರಿಣಾಮಕಾರಿ ಹಾಗೂ ನಿರ್ಣಾಯಕ ಕ್ರಮಗಳನ್ನು ಮುಂದಿನ ಆರು ತಿಂಗಳುಗಳಲ್ಲಿ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಸಿಆರ್‌ಪಿಎಫ್ ಮುಖ್ಯ ಕಾರ್ಯಾಲಯಕ್ಕೆ ತಮ್ಮ ಮೊದಲ ಭೇಟಿಯ ಸಂದರ್ಭ ಶುಕ್ರವಾರ ಹೇಳಿದ್ದಾರೆ. ಇದೇ ಸಮಯ ನಗರದ ನಕ್ಸಲರು ಹಾಗೂ ಅವರಿಗೆ ಸಹಾಯ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು  ಅವರು ಸೂಚಿಸಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ನಕ್ಸಲ್ ಬಾಧಿತ ಜಿಲ್ಲೆಗಳಲ್ಲಿ ಕಾರ್ಯಾಚರಿಸುವ ಸಿಆರ್‌ಪಿಎಫ್ ಪಡೆಗಳ ಸನ್ನದ್ಧತೆಯ ಕುರಿತಂತೆಯೂ ಸಚಿವರು ಪರಿಶೀಲಿಸಿದರು.

ಜಮ್ಮು ಕಾಶ್ಮೀರದಲ್ಲಿ ಸದ್ಯ ನಿಯೋಜಿಸಲ್ಪಟ್ಟಿರುವ ಸಿ ಆರ್ ಪಿ ಎಫ್‍ ಪಡೆಗಳಿಗೆ ಚಳಿಗಾಲದಲ್ಲಿ ಅಗತ್ಯವಿರುವ ಸೌಲಭ್ಯಗಳ ಕುರಿತಂತೆಯೂ ಗೃಹ ಸಚಿವರು ಚರ್ಚಿಸಿದರಲ್ಲದೆ ಉಗ್ರರ ವಿರುದ್ಧ ಕಠಿಣ ಕ್ರಮ ಹಾಗೂ ಕಾನೂನು ಸುವ್ಯವಸ್ಥೆಗೆ ಶ್ರಮಿಸುವ ಅಗತ್ಯವನ್ನೂ ಒತ್ತಿ ಹೇಳಿದರು.

ಸಿ ಆರ್ ಪಿ ಎಫ್‍ ಜವಾನರಿಗೆ ವಿವಿಧ ಕ್ರೀಡಾ ಕಾರ್ಯಕ್ರಮಗಳು ಹಾಗೂ ಪ್ರವಾಸ ಕಾರ್ಯಕ್ರಮಗಳನ್ನೂ ಆಯೋಜಿಸುವಂತೆ ಸಚಿವರು ಸಲಹೆ ನೀಡಿದರಲ್ಲದೆ ಕೇಂದ್ರ ಸರಕಾರದ ಹಲವು ಯೋಜನೆಗಳ ಲಾಭಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪುವಂತಾಗಲೂ ಜವಾನರು ಶ್ರಮಿಸಬೇಕೆಂದರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News