ಧೋನಿಯ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2019-11-16 12:09 GMT

ಇಂದೋರ್, ನ.16: ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 130 ರನ್‌ಗಳ ಅಂತರದಿಂದ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ತನ್ನ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ನಾಯಕನಾಗಿ ಅತ್ಯಂತ ಹೆಚ್ಚು ಬಾರಿ ಇನಿಂಗ್ಸ್ ಅಂತರದ ಗೆಲುವು ದಾಖಲಿಸಿರುವ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯೊಂದನ್ನು ಮುರಿದರು. ಕೊಹ್ಲಿ ಇದೀಗ 10ನೇ ಬಾರಿ ಇನಿಂಗ್ಸ್ ಅಂತರದ ಜಯ ಸಾಧಿಸಿದ್ದರೆ, ಧೋನಿ ಭಾರತದ ನಾಯಕನಾಗಿ 9 ಬಾರಿ ಈ ಸಾಧನೆ ಮಾಡಿದ್ದರು. ಮುಹಮ್ಮದ್ ಅಝರುದ್ದೀನ್(8 ಇನಿಂಗ್ಸ್)ಹಾಗೂ ಸೌರವ್ ಗಂಗುಲಿ(7)ಆ ಬಳಿಕದ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಕೊಹ್ಲಿ ಅವರು ಆಸ್ಟ್ರೇಲಿಯದ ಮಾಜಿ ನಾಯಕ ಅಲನ್ ಬಾರ್ಡರ್ ಅವರ 32 ಟೆಸ್ಟ್ ಪಂದ್ಯದ ದಾಖಲೆಯನ್ನು ಸರಿಗಟ್ಟಿದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿದ ನಾಯಕರ ಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 109 ಪಂದ್ಯಗಳಲ್ಲಿ 53ರಲ್ಲಿ ಜಯ ಸಾಧಿಸಿ ಅಗ್ರ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ 2ನೇ ಸ್ಥಾನ(77 ಪಂದ್ಯ, 48 ಗೆಲುವು)ಹಾಗೂ ಸ್ಟೀವ್ ಸ್ಮಿತ್(57 ಪಂದ್ಯ, 41 ಗೆಲುವು)ಮೂರನೇ ಸ್ಥಾನದಲ್ಲಿದ್ದಾರೆ.

ಭಾರತ ಸ್ವದೇಶದಲ್ಲಿ ಸತತ ಮೂರನೇ ಬಾರಿ ಇನಿಂಗ್ಸ್ ಅಂತರದ ಜಯ ದಾಖಲಿಸಿದೆ. ತವರು ನೆಲದಲ್ಲಿ ಮೂರನೇ ಬಾರಿ ಈ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News