ಸೈನಿಕರ ವೆಚ್ಚ ಹಂಚಿಕೆ ಮಾತುಕತೆಯಿಂದ ಹೊರ ನಡೆದ ಅಮೆರಿಕ: ದಕ್ಷಿಣ ಕೊರಿಯ

Update: 2019-11-19 16:40 GMT

ಸಿಯೋಲ್ (ದಕ್ಷಿಣ ಕೊರಿಯ), ನ. 19: ದಕ್ಷಿಣ ಕೊರಿಯದಲ್ಲಿರುವ ಅಮೆರಿಕ ಪಡೆಗಳಿಗೆ ದಕ್ಷಿಣ ಕೊರಿಯ ನೀಡುವ ವೆಚ್ಚದಲ್ಲಿ ಏರಿಕೆ ಮಾಡುವುದಕ್ಕೆ ಸಂಬಂಧಿಸಿದ ಮಾತುಕತೆಯಿಂದ ಅಮೆರಿಕ ಹೊರನಡೆದಿದೆ ಎಂದು ದಕ್ಷಿಣ ಕೊರಿಯ ಮಂಗಳವಾರ ತಿಳಿಸಿದೆ.

‘ನ್ಯಾಯೋಚಿತ ಹಾಗೂ ಸಮಾನತೆಯ’ ಒಪ್ಪಂದವೊಂದನ್ನು ತನ್ನ ಮಿತ್ರಪಕ್ಷವು ನಿರಾಕರಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಪರಮಾಣು ಶಕ್ತ ಉತ್ತರ ಕೊರಿಯದಿಂದ ದಕ್ಷಿಣ ಕೊರಿಯವನ್ನು ರಕ್ಷಿಸಲು ಆ ದೇಶದಲ್ಲಿ ಅಮೆರಿಕ ನಿಯೋಜಿಸಿರುವ 28,500 ಅಮೆರಿಕ ಸೈನಿಕರ ವೆಚ್ಚವನ್ನು ನಿಭಾಯಿಸಲು ದಕ್ಷಿಣ ಕೊರಿಯವು ಹೆಚ್ಚು ಹಣ ನೀಡಬೇಕು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸುತ್ತಾ ಬಂದಿದ್ದಾರೆ.

ಅಮೆರಿಕವು ದಕ್ಷಿಣ ಕೊರಿಯದಿಂದ ಮುಂದಿನ ವರ್ಷ 5 ಬಿಲಿಯ ಡಾಲರ್ ಕೇಳುತ್ತಿದೆ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ಹೇಳಿದ್ದಾರೆ. ಇದು 5 ಪಟ್ಟು ಅಧಿಕವಾಗಿದೆ. ಈ ಎರಡು ಮಿತ್ರದೇಶಗಳ ನಡುವಿನ ಬಿಕ್ಕಟ್ಟು ಅವುಗಳ ನಡುವಿನ ಮೈತ್ರಿಗೆ ಕಂಟಕವಾಗಬಹುದು ಎಂಬ ಆತಂಕವೂ ತಲೆದೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News