ಗೂಂಡಾ ಕಾಯ್ದೆಯಡಿ ರೌಡಿ ಬಂಧನ

Update: 2019-11-21 14:22 GMT

ಬೆಂಗಳೂರು, ನ.21: ವಿವಿಧ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ರೌಡಿ ಕಾರ್ತಿಕ್ ಯಾನೆ ರಾಹುಲ್‌ನನ್ನು ಗೂಂಡಾ ಕಾಯ್ದೆಯಡಿ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಹಲಸೂರಿನ ಗೌತಮ್‌ ಪುರದ ರೌಡಿ ಕಾರ್ತಿಕ್(29), ಹಲಸೂರು ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ. ಅತ್ಯಾಚಾರ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷೆ ವಿಧಿಸಿತ್ತು. ಆದರೆ, ಜೈಲಿನಿಂದ ಹೊರಬಂದು, ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಎನ್ನಲಾಗಿದೆ.

ರೌಡಿ ಕಾರ್ತಿಕ್‌ನನ್ನು ಹಲವು ಬಾರಿ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ ಬುದ್ಧಿ ಕಲಿಯದೆ ರೌಡಿ ಚಟುವಟಿಕೆಗಳಲ್ಲಿ ತೊಡಗಿ ಗೂಂಡಾ ವರ್ತನೆ ಮಾಡುತ್ತ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News