30 ಲಕ್ಷ ವರ್ಷಗಳ ಹಳೆಯದಾದ ಮಾನವ ಅಸ್ಥಿಪಂಜರ ಪತ್ತೆ

Update: 2023-06-30 05:28 GMT

1859: ಇಂಗ್ಲೆಂಡ್‌ನ ಪರಿಸರವಾದಿ, ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತಮ್ಮ ಪ್ರಸಿದ್ಧ ಕೃತಿ ‘ಆನ್ ದ ಒರಿಜಿನ್ ಆಫ್ ಸ್ಪೀಸಿಸ್’ ಕೃತಿಯನ್ನು ಪ್ರಕಟಿಸಿದರು.

1914: ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸಲೋನಿ ಇಟಲಿಯ ಸೋಶಿಯಲಿಸ್ಟ್ ಪಾರ್ಟಿಯನ್ನು ತ್ಯಜಿಸಿದನು.

1947: ಅಮೆರಿಕದ ಲೇಖಕ ಜಾನ್ ಸ್ಟೇನ್‌ಬೆಕ್‌ರ ಜನಪ್ರಿಯ ಕಾದಂಬರಿ ‘ಪರ್ಲ್’ ಪ್ರಕಟಗೊಂಡಿತು.

1963: ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿಯ ಹಂತಕ ಲೀ ಹಾರ್ವೆ ಓಸ್ವಾಲ್ಡ್ ಡಲ್ಲಾಸ್‌ನ ನೈಟ್‌ಕ್ಲಬ್ಬೊಂದರ ಮಾಲಕನಿಂದ ಹತ್ಯೆಗೊಳಗಾದನು.

1966: ಅಮೆರಿಕದ ನ್ಯೂಯಾರ್ಕ್‌ನಲ್ಲಿ ದಟ್ಟ ವಿಷಹೊಗೆಯ ಕಾರಣದಿಂದಾಗಿ ಸುಮಾರು 400 ಜನರು ಉಸಿರಾಟದ ಸಮಸ್ಯೆ ಹಾಗೂ ಹೃದಯಾಘಾತದಿಂದ ನಿಧನರಾದರು.

1966: ಬಲ್ಗೇರಿಯಾದ ವಿಮಾನವೊಂದು ಸ್ಲೋವಾಕಿಯಾದ ಬ್ರಾಟಿಸ್ಲಾವಾ ಎಂಬಲ್ಲಿ ಪತನಗೊಂಡಿತು. ಪರಿಣಾಮ 82 ಜನರು ಸಾವಿಗೀಡಾದರು.

1974: ಇಥಿಯೋಪಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ತಂಡವು ಸುಮಾರು 30 ಲಕ್ಷ ವರ್ಷಗಳ ಹಳೆಯದಾದ ಮಾನವವಂಶಿ ಅರ್ಧ ಅಸ್ಥಿಪಂಜರವನ್ನು ಪತ್ತೆ ಹಚ್ಚಿತು. ಇದು ಆಫ್ರಿಕಾ ದೇಶವೊಂದರಲ್ಲಿ ಪತ್ತೆಯಾದ ಪರಿಪೂರ್ಣ ಮಾನವನ ಸಂಶೋಧನೆಯಾಗಿದೆ. ಈ ಅಸ್ಥಿಪಂಜರವನ್ನು ಲೂಸಿ ಅಥವಾ ಆಸ್ಟ್ರಾಲೊಪಿಥೆಕಸ್ ಎಂದು ಉಲ್ಲೇಖಿಸಲಾಯಿತು.

1992: ಚೀನಾದ ಪರ್ವತ ಪ್ರದೇಶದಲ್ಲಿ ಬೋಯಿಂಗ್ 734 ವಿಮಾನ ಪತನಗೊಂಡ ಪರಿಣಾಮ 141 ಜನರು ಮೃತಪಟ್ಟರು.

2013: ಇರಾನ್ ದೇಶವು ಜಿನೇವಾದಲ್ಲಿ ನಡೆದ ಸಭೆಯಲ್ಲಿ ತನ್ನ ಪರಮಾಣು ಚಟುವಟಿಕೆಗಳ ಕುರಿತಂತೆ ಅಮೆರಿಕದೊಂದಿಗೆ ತಾತ್ಕಾಲಿಕ ಒಪ್ಪಂದವೊಂದನ್ನು ಮಾಡಿಕೊಂಡಿತು.

2011: ಮಾವೊ ನಾಯಕ ಕಿಶನ್‌ಜಿ ನಿಧನರಾದರು.

1943: ಭಾರತದ ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ