ಚುನಾವಣಾ ಆಯೋಗ ಆವಾಂತರ: ಅಭ್ಯರ್ಥಿಯ ಕ್ರಮ ಸಂಖ್ಯೆಯಲ್ಲಿ ವ್ಯತ್ಯಾಸ

Update: 2019-11-24 17:28 GMT

ಬೆಂಗಳೂರು, ನ.22: ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಅಂಬ್ರೋಸ್ ಡಿ’ ಮೆಲ್ಲೋ ಅವರಿಗೆ ಚುನಾವಣಾ ಆಯೋಗವು ನಿಮ್ಮ ಕ್ರಮ ಸಂಖ್ಯೆ 14 ಎಂದು ಅಂತಿಮಗೊಳಿಸಿದೆ. ಆದರೆ, ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿದಾಗ ಮೆಲ್ಲೋ ಅವರ ಕ್ರಮ ಸಂಖ್ಯೆಯಲ್ಲಿ 12, 13, 14 ಎಂಬ ವ್ಯತ್ಯಾಸ ಕಂಡು ಬಂದಿದೆ.

ಅಂಬ್ರೋಸ್ ಡಿ’ ಮೆಲ್ಲೊ ಅವರಿಗೆ ಚುನಾವಣಾ ಆಯೋಗವು ಚಪ್ಪಲಿ ಚಿಹ್ನೆಯನ್ನು ನೀಡಿದೆ. ಆದರೆ, ಆಯೋಗವು ಕ್ರಮ ಸಂಖ್ಯೆ ನೀಡುವಲ್ಲಿ ಎಡವಟ್ಟು ಮಾಡಿದೆ. ಇದರಿಂದ, ಅಭ್ಯರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ.

ಶಿವಾಜಿನಗರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂಬ್ರೋಸ್ ಡಿ’ ಮೆಲ್ಲೊ ಅವರಿಗೆ ಕ್ರಮ ಸಂಖ್ಯೆಯನ್ನು 14 ಎಂದು ನೀಡಿದರೆ, ಮತ್ತೊಂದು ಪಟ್ಟಿಯಲ್ಲಿ ಇದೇ ಅಭ್ಯರ್ಥಿ ಮೆಲ್ಲೊ ಅವರಿಗೆ 13, 12 ಎಂಬ ಕ್ರಮ ಸಂಖ್ಯೆಯನ್ನು ನೀಡಿದ್ದು, ಇದರಿಂದ, ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಮತದಾರರು ಮತ ಹಾಕಲು ಇವಿಎಂ ಬಳಿ ಹೋದಾಗ ಚಪ್ಪಲಿ ಗುರುತಿಗೆ ಬೀಳುವ ಮತಗಳು ಬೇರೆ ಅವರಿಗೂ ಹೋಗುವ ಸಂಭವವಿರುತ್ತದೆ. ಹೀಗಾಗಿ, ಸ್ಪಷ್ಟನೆ ಕೋರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮೆಲ್ಲೋ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಆಯೋಗದ ಇಂತಹ ಎಡವಟ್ಟಿನಿಂದಾಗಿ ನನ್ನ ಪ್ರಚಾರದ ಅವಧಿ ಮೊಟಕಾಗಿದೆ, ಕೆಲ ದಿನಗಳು ಪ್ರಚಾರ ಮಾಡಲಾಗಿಲ್ಲ ಎಂಬ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

‘ಕ್ರಮ ಸಂಖ್ಯೆಯ ಈ ಗೊಂದಲ ಇವಿಎಂನಲ್ಲಿಯೂ ಇರುವುದಿಲ್ಲ ಎಂಬ ಸ್ಪಷ್ಟಣೆಯನ್ನು ಚುನಾವಣಾ ಆಯೋಗ ನೀಡಬೇಕೆಂದು ಕೋರಿ ಧರಣಿ ಸತ್ಯಾಗ್ರಹ ನಡೆಸಲಿದ್ದೇನೆ’

 -ಅಂಬ್ರೋಸ್ ಡಿ’ ಮಲ್ಲೊ, ಪಕ್ಷೇತರ ಅಭ್ಯರ್ಥಿ, ಶಿವಾಜಿನಗರ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News