ಸಂವಿಧಾನ ಸಮರ್ಪಣಾ ದಿನ

Update: 2023-06-30 05:28 GMT

1789: ಅಮೆರಿಕ ದೇಶದಲ್ಲಿ ಪ್ರಥಮ ಬಾರಿಗೆ ಥ್ಯಾಂಕ್ಸ್ ಗಿವಿಂಗ್ ದಿನ ಆಚರಿಸಲಾಯಿತು.

1916: ವಿಶ್ವ ಪ್ರಥಮ ಮಹಾಯುದ್ಧದಲ್ಲಿ ಗ್ರೀಸ್ ದೇಶವು ಜರ್ಮನಿಯ ಮೇಲೆ ಯುದ್ಧ ಸಾರಿತು.

1949: ಭಾರತವನ್ನು ಒಂದು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿಸಿದ ಸಂವಿಧಾನವನ್ನು ಔಪಚಾರಿಕವಾಗಿ ಭಾರತದ ಸಂವಿಧಾನ ಸಭೆಯು ಅಳವಡಿಸಿತು. 1950 ಜ.26ರಂದು ಇದು ಅಧಿಕೃತವಾಗಿ ಜಾರಿಗೆ ಬಂದಿತು. ಜ.26ರ ಈ ದಿನವನ್ನೇ ಗಣರಾಜ್ಯ ದಿನವನ್ನಾಗಿ ದೇಶದಲ್ಲಿ ಪ್ರತೀವರ್ಷ ಆಚರಿಸಲಾಗುತ್ತದೆ. ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿ ಹಾಗೂ ಡಾ.ಅಂಬೇಡ್ಕರ್ ನೇತೃತ್ವದಲ್ಲಿದ್ದ ಸಂವಿಧಾನ ಕರಡು ಸಮಿತಿಯು ಈ ಮಹತ್ವದ ಸಂವಿಧಾನವನ್ನು ರೂಪಿಸಿಕೊಡುವಲ್ಲಿ ಯಶಸ್ವಿಯಾದವು.

1955: ಸೈಪ್ರಸ್‌ನಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಯಿತು.

1984: ಅಮೆರಿಕ-ಇರಾಕ್‌ಗಳ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಮರುಸ್ಥಾಪಿತಗೊಂಡವು.

2003: ಕಾಶ್ಮೀರದಲ್ಲಿ ಕದನವಿರಾಮ ಘೋಷಿಸುವ ಪಾಕಿಸ್ತಾನದ ಬೇಡಿಕೆಯನ್ನು ಭಾರತ ಒಪ್ಪಿಕೊಂಡಿತು.

2008: ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 164 ಜನರು ಸಾವನ್ನಪ್ಪಿದರು. ಸುಮಾರು 308 ಮಂದಿ ಗಾಯಗೊಂಡ ವರದಿಯಾಗಿದೆ. ಮೂರು ದಿನಗಳ ಕಾಲ ನಡೆದ ಈ ದಾಳಿ, ನ.29ರಂದು ಕೊನೆಗೊಂಡಿತು. ಈ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಯಿತು.

1906: ಕನ್ನಡದ ಪ್ರಮುಖ ಸಾಹಿತಿ, ಶ್ರೇಷ್ಠ ವಿದ್ವಾಂಸ, ಕವಿ ಹಾಗೂ ವಿಮರ್ಶಕ ತೀ.ನಂ.ಶ್ರೀಕಂಠಯ್ಯ ಜನ್ಮದಿನ.

1921: ಕ್ಷೀರಕ್ರಾಂತಿಯ ಪಿತಾಮಹ ಎಂದೇ ಖ್ಯಾತರಾದ ವರ್ಗಿಸ್ ಕುರಿಯನ್ ಜನ್ಮದಿನ.

1926: ಭಾರತದ ವಿಜ್ಞಾನಿ, ಶಿಕ್ಷಣ ತಜ್ಞ ಯಶ್ ಪಾಲ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ