ಐಟಿ ನಗರಿಯಲ್ಲಿ ಕಳ್ಳತನವನ್ನು ಹಿಂದಿಕ್ಕಿದ ಡಿಜಿಟಲ್ ವಂಚನೆ ಪ್ರಕರಣಗಳು!

Update: 2019-11-27 12:09 GMT
ಸಾಂದರ್ಭಿಕ ಚಿತ್ರ (medium.com)

ಬೆಂಗಳೂರು: ಐಟಿ ನಗರಿ ಬೆಂಗಳೂರಿನಲ್ಲಿ ಕಳ್ಳತನ, ಡಕಾಯಿತಿ ಪ್ರಕರಣಗಳಿಗಿಂತ ಡಿಜಿಟಲ್ ಅಪರಾಧ ಪ್ರಕರಣಗಳೇ ಹೆಚ್ಚಾಗಿವೆ. ಈ ವರ್ಷ ಇಲ್ಲಿಯ ತನಕ ಡಿಜಿಟಲ್ ವಂಚನೆ ಪ್ರಕರಣಗಳು ರಾಜಧಾನಿಯಲ್ಲಿ 10,000 ದಾಟಿವೆ.

ಇದಕ್ಕೆ ಹೋಲಿಸಿದಾಗ ಇಡೀ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳ ತನಕ  ವರದಿಯಾದ ಕಳ್ಳತನ, ಸರಕಳ್ಳತನ  ಡಕಾಯಿತಿ ಪ್ರಕರಣಗಳ ಪ್ರಮಾಣ 1,595ರಷ್ಟಾಗಿದೆ.

ಡಿಜಿಟಲ್ ವಂಚನೆ ಪ್ರಕರಣಗಳು ಏರಿಕೆಯಾಗಲು ದತ್ತಾಂಶ ಸೋರಿಕೆಯೇ ಕಾರಣವಾಗಿದೆ. ಡಿಜಿಟಲ್ ಪಾವತಿ ವಿಧಾನಗಳಲ್ಲಿ ಸೂಕ್ತ ನಿಯಂತ್ರಣಾ ವ್ಯವಸ್ಥೆಯಿಲ್ಲದೇ ಇರುವುದೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.

ಇತ್ತೀಚೆಗೆ ಕ್ಯೂಆರ್ ಕೋಡ್ ವಂಚನೆ ಪ್ರಕರಣಗಳೂ ಅಧಿಕಗೊಂಡಿವೆ. ಕಳೆದ ಶನಿವಾರ ಬೆಂಗಳೂರಿನ ವ್ಯಕ್ತಿಯೊಬ್ಬರ ಪುತ್ರಿಯ ಗಿಟಾರ್ ಖರೀದಿಸುತ್ತೇನೆಂದು ಹೇಳಿದ ಒಬ್ಬ ಕಳುಹಿಸಿದ ಕ್ಯೂಆರ್ ಕೋಡ್  ಸ್ಕ್ಯಾನ್ ಮಾಡಿ ಆ ವ್ಯಕ್ತಿ ರೂ. 53,000 ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News