×
Ad

ಸ್ನೇಹಿತನ ಹೆಂಡತಿಯ ಅತ್ಯಾಚಾರ ಯತ್ನ ಆರೋಪ: ಟೆಕ್ಕಿ ಬಂಧನ

Update: 2019-11-27 19:19 IST

ಬೆಂಗಳೂರು, ನ.27: ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಟೆಕ್ಕಿಯನ್ನು ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ನೀಲಬ್ ನಯನ್ ಬಂಧಿತ ಆರೋಪಿ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನೀಲಬ್ ಸ್ನೇಹಿತರು ಬರ್ತ್ ಡೇ ಪಾರ್ಟಿ ಆಚರಿಸಿದ್ದರು. ಪಾರ್ಟಿ ಮುಗಿಸಿ ಅಲ್ಲಿಯೇ ರೂಮ್‌ವೊಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿದ್ದ ನೀಲಬ್ ಪಕ್ಕದ ರೂಮಿನಲ್ಲಿ ಮಲಗಿದ್ದ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಸಂತ್ರಸ್ತೆ ಆರೋಪಿಯಿಂದ ತಪ್ಪಿಸಿಕೊಂಡು ಕಿರುಚಾಡಿದ್ದಾರೆ. ಇದರಿಂದ ಭಯಗೊಂಡು ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಬೆಳ್ಳಂದೂರು ಠಾಣೆಗೆ ಸಂತ್ರಸ್ತೆ ಮಹಿಳೆಯ ಗಂಡ ದೂರು ನೀಡಿದ್ದು, ದೂರಿನನ್ವಯ ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News