ಮೆಸ್ಸಿ ನಿವೃತ್ತಿ ದಿನಾಂಕ ದೂರವಿಲ್ಲ: ವಾಲ್ವರ್ಡೆ

Update: 2019-12-07 18:11 GMT

ಬಾರ್ಸಿಲೋನಾ , ಡಿ.7: ಆರನೇ ಬಾರಿ ಬ್ಯಾಲನ್ ಡಿ’ಓರ್ ಕಿರೀಟ ಪಡೆದಿರುವ ಲಿಯೋನೆಲ್ ಮೆಸ್ಸಿ ನಿವೃತ್ತಿಯಾಗುವ ದಿನಾಂಕ ದೂರದಲ್ಲಿಲ್ಲ ಎಂದು ಬಾರ್ಸಿಲೋನಾ ತಂಡದ ವ್ಯವಸ್ಥಾಪಕ ಎರ್ನೆಸ್ಟೊ ವಾಲ್ವರ್ಡೆ ತಿಳಿಸಿದ್ದಾರೆ. ಲಿಯೋನೆಲ್ ಮೆಸ್ಸಿ ಕಳೆದ ಸೋಮವಾರ ದಾಖಲೆಯ ಆರನೇ ಬಾರಿಗೆ ವರ್ಷದ ವಿಶ್ವ ಆಟಗಾರನಾಗಿ ಕಿರೀಟವನ್ನು ಪಡೆದಿದ್ದಾರೆ. ಈ ವರ್ಷ ಬಾರ್ಸಿಲೋನಾ ಪರ ಮೆಸ್ಸಿ 11 ಗೋಲುಗಳನ್ನು ದಾಖಲಿಸಿದ್ದಾರೆ.

ಮುಂದಿನ ದಿನಗಳಲ್ಲಿ ಲಿಯೋನೆಲ್ ಮೆಸ್ಸಿ ನಿವೃತ್ತರಾಗುತ್ತಾರೆ ಎಂಬ ಕಲ್ಪನೆಗೆ ಫುಟ್ಬಾಲ್ ಜಗತ್ತು ಒಗ್ಗಿಕೊಳ್ಳಬೇಕು ಮತ್ತು ಅರ್ಜೆಂಟೀನಾದ ಕೋಚ್ ಆಗುವುದನ್ನು ಜನರು ಇಷ್ಟಪಡುತ್ತಾರೆ ಎಂದು ಹೇಳಿದರು.

ಮೆಸ್ಸಿ ನಿವೃತ್ತಿಯು ಹತ್ತಿರವಾಗುತ್ತಿರುವುದರಿಂದ ನೀವು ಈ ಕ್ಷಣಗಳನ್ನು ಹೆಚ್ಚು ಆನಂದಿಸುತ್ತೀರಿ ಎಂದು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ವಾಲ್ವರ್ಡ್ ಸೂಚನೆ ನೀಡಿದ್ದಾರೆ.

‘‘ಇದು ಸ್ವಾಭಾವಿಕ ಸಂಗತಿಯಾಗಿದೆ, ಇದು ಸಾಮಾನ್ಯವೆಂದು ತೋರುತ್ತದೆ, ಲಿಯೋಗೆ 32 ವರ್ಷ ವಯಸ್ಸಾಗಿದೆ ಮತ್ತು ಅವರು ಈಗ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದಾರೆಂದು ನಾನು ಭಾವಿಸದಿದ್ದರೂ ಅವರು ಮುಂದೆ ನಿವೃತ್ತಿಯಾಗಲಿದ್ದಾರೆ ’’ಎಂದು ವಾಲ್ವರ್ಡೆ ಹೇಳಿದರು.

‘‘ ಅವರ ನಿವೃತ್ತಿಯನ್ನು ನಾವು ಸ್ವಾಭಾವಿಕವಾಗಿ ನೋಡಬೇಕು. ಪ್ರತಿಯೊಬ್ಬರೂ ನಿರ್ದಿಷ್ಟ ವಯಸ್ಸಿಗೆ ಬಂದಾಗ ನಿವೃತ್ತಿಯ ಬಗ್ಗೆ ಯೋಚಿಸುತ್ತಾರೆ, ಆದರೆ ಅವರು ಅದರ ಬಗ್ಗೆ ಯೋಚಿಸುತ್ತಿರುವುದರಿಂದ ಅವರು ಮುಂದಿನ ಮೂರು ದಿನಗಳಲ್ಲಿ ನಿವೃತ್ತಿ ಹೊಂದಲಿದ್ದಾರೆಂದು ಅರ್ಥವಲ್ಲ’’ ಎಂದು ವಾಲ್ವರ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News