38 ಜನರಿದ್ದ ಚಿಲಿಯ ಮಿಲಿಟರಿ ವಿಮಾನ ನಾಪತ್ತೆ

Update: 2019-12-10 06:32 GMT
ಸಾಂದರ್ಭಿಕ ಚಿತ್ರ

ಸ್ಯಾಂಟಿಯಾಗೊ: ಅಂರ್ಟಾಕ್ಟಿಕಾಗೆ ಹೊರಟಿದ್ದ ಚಿಲಿ ವಾಯು ಪಡೆಯ 38 ಜನರಿದ್ದ ಮಿಲಿಟರಿ ವಿಮಾನ ಸೋಮವಾರ ನಾಪತ್ತೆಯಾಗಿದೆ. ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಾಯು ಪಡೆ ತಿಳಿಸಿದೆ.

ಸಿ-130 ಹಕ್ರ್ಯುಲಿಸ್ ವಿಮಾನದಲ್ಲಿ 17 ಮಂದಿ ಸಿಬ್ಬಂದಿ ಹಾಗೂ ಮೂವರು ನಾಗರಿಕರೂ ಸೇರಿದಂತೆ 21 ಪ್ರಯಾಣಿಕರಿದ್ದರು. ಅಂರ್ಟಾಕ್ಟಿಕಾದಲ್ಲಿನ ಚಿಲಿ ನೆಲೆಯಲ್ಲಿ ಇಂಧನ ಪೂರೈಕೆ  ಪೈಪ್‍ಲೈನ್ ಹಾಗೂ ಇತರ ಸಾಮಗ್ರಿಗಳ ಪರಿಶೀಲನೆಗೆಂದು ವಿಮಾನದಲ್ಲಿದ್ದವರು ಅಲ್ಲಿಗೆ ಹೊರಟಿದ್ದರು.

ವಿಮಾನ ಸೋಮವಾರ ಸಂಜೆ 4.55ಕ್ಕೆ ಪುಂಟೆ ಅರೆನಾಸ್ ನಗರದಿಂದ ಹೊರಟಿತ್ತು ಹಾಗೂ 6.13ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತ್ತು. ಈ ಸಂದರ್ಭ ಹವಾಮಾನದಲ್ಲಿ ಯಾವುದೇ ವೈಪರೀತ್ಯವಿರಲಿಲ್ಲ ಎಂದು ವಾಯು ಪಡೆ ಹೇಳಿದೆ. ಸಂಪರ್ಕ ಕಡಿದುಕೊಂಡ ಸಂದರ್ಭ ವಿಮಾನವಿರಬೇಕಾಗಿದ್ದ ಸ್ಥಳದಲ್ಲಿ ಹಡಗಿನ ಮೂಲಕ ಶೋಧ ಕಾರ್ಯಾಚರಣೆ ನಡೆದಿದೆ. ಸಂಪರ್ಕ ಕಳೆದುಕೊಂಡ ಸಂದರ್ಭ ಅದು ತನ್ನ ಅರ್ಧ ಹಾದಿಯನ್ನು ಕ್ರಮಿಸಿತ್ತು. ವಿಮಾನದಿಂದ ಯಾವುದೇ ತುರ್ತು ಸಂದೇಶ ಕೂಡ ರವಾನೆಯಾಗಿರಲಿಲ್ಲ.

ವಿಮಾನದ ಪೈಲಟ್ ಬಹಳಷ್ಟು ಅನುಭವಿಯಾಗಿದ್ದರು ಹಾಗೂ ವಿಮಾನ ಸೋಮವಾರ ರಾತ್ರಿಯೇ ವಾಪಸಾಗಲಿತ್ತು ಎಂದು ನಾಲ್ಕನೇ ಏರ್ ಬ್ರಿಗೇಡ್‍ನ ಜನರಲ್ ಎಡ್ವರ್ಡೊ ಮೊಸ್ಕೇರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News