ವರ್ಷದಲ್ಲಿ 3ನೇ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಇಸ್ರೇಲ್

Update: 2019-12-12 15:17 GMT

ಜೆರುಸಲೇಮ್, ಡಿ. 12: ಇಸ್ರೇಲ್‌ನಲ್ಲಿ ಮಾರ್ಚ್ 2ರಂದು ಮತ್ತೆ ಸಂಸದೀಯ ಚುನಾವಣೆ ನಡೆಯಲಿದೆ. ಇದು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಆ ದೇಶದಲ್ಲಿ ನಡೆಯುತ್ತಿರುವ ಮೂರನೇ ಚುನಾವಣೆಯಾಗಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹಾಗೂ ಮೈತ್ರಿ ಸರಕಾರವೊಂದನ್ನು ರಚಿಸಲು ಎರಡು ಪ್ರಧಾನ ಪಕ್ಷಗಳು ವಿಫಲವಾದ ಬಳಿಕ, ದೇಶವು ಮತ್ತೆ ಚುನಾವಣೆಯತ್ತ ಹೊರಳಿದೆ.

ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆ ನಡೆಸುವ ನಿರ್ಣಯವನ್ನು ಸಂಸದರು ಗುರುವಾರ 94-0 ಮತಗಳ ಅಂತರದಿಂದ ಅಂಗೀಕರಿಸಿದರು.

ಸೆಪ್ಟಂಬರ್‌ನಲ್ಲಿ ಚುನಾವಣೆ ನಡೆದ ಬಳಿಕ, ಸರಕಾರ ರಚಿಸುವ ಕೊನೆಯ ಅವಕಾಶದ ಗಡುವು ಮುಗಿದ ಗಂಟೆಗಳ ಬಳಿಕ ಸಂಸತ್ತು ಈ ನಿರ್ಣಯವನ್ನು ಅಂಗೀಕರಿಸಿದೆ.

ಎಪ್ರಿಲ್ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಚುನಾವಣೆಗಳಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಕನ್ಸರ್ವೇಟಿವ್ ಲಿಕುಡ್ ಪಾರ್ಟಿಗಾಗಲಿ, ಅವರ ಪ್ರಧಾನ ಎದುರಾಳಿ ಮಾಜಿ ಜನರಲ್ ಬೆನ್ನಿ ಗಾಂಟ್ಝ್‌ರ ಬ್ಲೂ ಆ್ಯಂಡ್ ವೈಟ್ ಪಾರ್ಟಿಗಾಗಲಿ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಅದೇ ವೇಳೆ, ಮೈತ್ರಿ ಸರಕಾರವೊಂದನ್ನು ರಚಿಸಲು ಈ ಎರಡೂ ಪಕ್ಷಗಳಿಗೆ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News