ಭಾರತ ಫೈನಲ್‌ಗೆ ತಲುಪಿದರೆ ಪಿಂಕ್ ಬಾಲ್ ಟೆಸ್ಟ್ ಆಡಬಹುದು

Update: 2019-12-12 17:28 GMT

ಮೆಲ್ಬೋರ್ನ್, ಡಿ.12: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಫೈನಲ್‌ಗೆ ಲಗ್ಗೆ ಇಟ್ಟರೆ, ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ಹಗಲು-ರಾತ್ರಿ ಪಂದ್ಯ ಆಡುವಂತೆ ಭಾರತಕ್ಕೆ ಮನವರಿಕೆ ಮಾಡಿಕೊಡಲು ಸುಲಭವಾಗುತ್ತದೆ ಎದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಕೇವಿನ್ ರಾಬರ್ಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಭಾರತ ಪಿಂಕ್ ಬಾಲ್ ಟೆಸ್ಟ್ ಆಡಲು ನಿರಾಕರಿಸಿತ್ತು. ಸೌರವ್ ಗಂಗುಲಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೋಲ್ಕತಾದಲ್ಲಿ ಇತ್ತೀಚೆಗೆ ಮೊದಲ ಬಾರಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಡೇ-ನೈಟ್ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಮುಂದಿನ ವರ್ಷ ಭಾರತದ ಸೀರಿಸ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡುವುದು ನಿಶ್ಚಿತ ಎನ್ನುವುದು ನಮ್ಮ ನಂಬಿಕೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ 2021ರಲ್ಲಿ ಫೈನಲ್ ತಲುಪುವ ಸಾಧ್ಯತಯಿದೆ. ಭಾರತ ಫೈನಲ್‌ಗೆ ತಲುಪಿದರೆ ಡೇ-ನೈಟ್ ಟೆಸ್ಟ್ ಆಯೋಜಿಸಲು ಸುಲಭವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News