ಮೂರು ವರ್ಷ ಗಳ ಗರಿಷ್ಠ ಮಟ್ಟಕ್ಕೇರಿದ ಚಿಲ್ಲರೆ ಹಣದುಬ್ಬರ,ಶೇ.3.8ಕ್ಕೆ ಕುಸಿದ ಕೈಗಾರಿಕಾ ಉತ್ಪಾದನೆ

Update: 2019-12-12 18:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.12: ಮಂದಗತಿಯಿಂದ ನಲುಗುತ್ತಿರುವ ದೇಶದ ಆರ್ಥಿಕತೆಯು ಎರಡು ಆಘಾತಗಳನ್ನು ಅನುಭವಿಸುವಂತಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿರುವ ಚಿಲ್ಲರೆ ಹಣದುಬ್ಬರವು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಜಿಗಿದಿದ್ದರೆ ಕೈಗಾರಿಕಾ ಉತ್ಪಾದನೆಯು ಕುಸಿದಿದೆ. ರಾಷ್ಟ್ರಿಯ ಸಾಂಖ್ಯಿಕ ಕಚೇರಿಯು ಗುರುವಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಆಹಾರ ಸಾಮಗ್ರಿಗಳ ದುಬಾರಿ ಬೆಲೆಗಳ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರವು ನವಂಬರ್ ತಿಂಗಳಿಗೆ ಶೇ.5.54ಕ್ಕೆ ಜಿಗಿದಿದೆ. ಅಕ್ಟೋಬರ್‌ನಲ್ಲಿ ಇದು ಶೇ.4.62ರಷ್ಟಿತ್ತು. 2016,ಜುಲೈನಲ್ಲಿ ದಾಖಲಾಗಿದ್ದ ಶೇ.6.07 ಚಿಲ್ಲರೆ ಹಣದುಬ್ಬರ ಈ ಹಿಂದಿನ ಗರಿಷ್ಠ ಮಟ್ಟವಾಗಿತ್ತು.

ಅತ್ತ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ)ಯು ಅಕ್ಟೋಬರ್‌ನಲ್ಲಿ ಮೈನಸ್ ಶೇ.3.8ರಷ್ಟು ಸಂಕುಚಿತಗೊಂಡಿದೆ. ಇದಕ್ಕೆ ಮುಖ್ಯವಾಗಿ ವಿದ್ಯುತ್,ಗಣಿಗಾರಿಕೆ ಮತ್ತು ತಯಾರಿಕೆ ಕ್ಷೇತ್ರಗಲ್ಲಿನ ಕಳಪೆ ಸಾಧನೆಯು ಕಾರಣವಾಗಿದೆ. 2018,ಅಕ್ಟೋಬರ್‌ನಲ್ಲಿ ಐಐಪಿ ಶೇ.8.4ಕ್ಕೆ ಹಿಗ್ಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News