ಬಿಸಿಸಿಐ ಜುಬೈಲ್ ಅಧ್ಯಕ್ಷರಾಗಿ ಝಕರಿಯಾ ಜೋಕಟ್ಟೆ ಆಯ್ಕೆ

Update: 2019-12-13 04:15 GMT

ಜುಬೈಲ್, ಡಿ.13: ಬ್ಯಾರೀಸ್ ಚೇಂಬರ್ ಆಫ಼್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಜುಬೈಲ್ ಘಟಕದ ಅಧ್ಯಕ್ಷರಾಗಿ‌ ಅಲ್ ಮುಝೈನ್ ಕಂಪೆನಿಯ ಸಿಇಒ ಝಕರಿಯಾ ಜೋಕಟ್ಟೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 

ನವೆಂಬರ್ 21ರಂದು ನಡೆದ ಜುಬೈಲ್ ಘಟಕದ ಉದ್ಘಾಟನಾ ಸಮಾರಂಭದ ಮರುದಿನ ಇಲ್ಲಿನ ಗೋಲ್ಡನ್ ಫ಼ಿಶ್ ಉಪಹಾರ ಗೃಹದಲ್ಲಿ ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಜುಬೈಲ್ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಸಭೆಯಲ್ಲಿ ಭಾರತದಿಂದ ಆಗಮಿಸಿದ ಬಿಸಿಸಿಐ ಕಾರ್ಯಕಾರಿ ಸಮಿತಿಯ ಸದಸ್ಯರು,  ಬಿಸಿಸಿಐ ಯುಎಇ ಘಟಕದ‌ ಅಧ್ಯಕ್ಷ ಎಸ್.ಎಂ.ಬಶೀರ್ ಮತ್ತು ಇತರ ಪ್ರತಿನಿಧಿಗಳು, ಬಿಸಿಸಿಐ ಖತರ್ ಮತ್ತು ಕುವೈತ್ ನ ಪ್ರತಿನಿಧಿಗಳು ಉಪಸ್ಥಿತರಿದ್ದರು

  ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ ಸಾಮಾನ್ಯ ಹುದ್ದೆ ಗೆ ಸೇರಿದ್ದಲ್ಲಿಂದ ತನ್ನ ಪಯಣವನ್ನು‌ ಆರಂಭಿಸಿದ್ದ  ಝಕರಿಯಾ ಅವರು ತನ್ನ ಕಠಿಣ  ಪರಿಶ್ರಮದಿಂದ ದ  ಅಲ್ ಮುಝೈನ್ ಕಂಪೆನಿಯನ್ನು ಸ್ಥಾಪಿಸಿ ಉದ್ಯಮಿಯಾಗಿ ಬೆಳೆದಿದ್ದರು. ಇಂದು ಅವರ ಕಂಪೆನಿಯು ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾ ಘಟಕಗಳಲ್ಲಿ ನಿರ್ಮಾಣ ಮತ್ತು ನಿರ್ವಹಣಾ ಕಾಮಗಾರಿಗಳನ್ನು ನಡೆಸುತ್ತಿದೆ. ಹಲವು ಸಾಮಾಜಿಕ ಸಂಘಟನೆಗಳಲ್ಲಿ  ಮತ್ತು ನುರಿತ ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ದುಡಿದ ಅನುಭವವನ್ನು ಮನಗಂಡು

ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

 ಉಪಾಧ್ಯಕ್ಷರಾಗಿ ಅಶ್ರಫ಼್ ಎಕ್ಸ್ ಪರ್ಟೈಸ್ ಮತ್ತು ಇಸ್ಮಾಯೀಲ್ ರಿಯಲ್ ಟೆಕ್ ಆಯ್ಕೆಯಾದರು. ಅದೇ ವೇಳೆ,  ಪ್ರಧಾನ ಕಾರ್ಯದರ್ಶಿಯಾಗಿ ಅಸಿಸ್ಕೊ ಕಂಪೆನಿ ಮಾಲಕ ಫ಼ಾರೂಕ್ ಮುಲ್ಕಿ ಅವರನ್ನು ಆಯ್ಕೆ ಮಾಡಲಾಯಿತು.

ಆಡಳಿತ ಕಾರ್ಯದರ್ಶಿಯಾಗಿ ಫಿರೋಝ್ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಶಾಹೀದ್ ಎನರ್ಜಿಯಾ, ಕೋಶಾಧಿಕಾರಿಯಾಗಿ ಅಸ್ಕಾಫ಼್ ಪ್ಲಾನ್ಟ್ ಸೊಲ್ಯೂಶನ್, ಸಲಹೆಗಾರರಾಗಿ ಆಸಿಫ಼್ ಅಮ್ಯಾಕೊ ಮತ್ತು ಬಶೀರ್ ಎನ್.ಸಿ.ಎಂ.ಎಸ್. ಅವರನ್ನು ಆಯ್ಕೆಮಾಡಲಾಯಿತು.

ಸಮಿತಿಯ ಸದಸ್ಯರಾಗಿ ಅಲ್ತಾಫ್ ಹುಸೈನ್ ಉಳ್ಳಾಲ, ಅಬ್ದುರ್ರಝಾಕ್ ಕೆ.ಎಂ.ಟಿ., ಅಮೀರ್ ಅಬ್ಬಾಸ್ ಎ.ಕೆ.ಎ., ಪಿ.ಇಸ್ಮಾಯೀಲ್ ಅಹ್ಮದ್, ಅಬ್ದುಸ್ಸಲಾಮ್, ಸಿದ್ದೀಕ್  ಹುಸೈನ್, ಮುಹಮ್ಮದ್ ಫ಼ಾರೂಕ್ ಎ.ಕೆ.ಎ., ಹೈದರ್ ಅಲಿ, ಇಮ್ರಾನ್ ಹಸನ್, ಮುಹಮ್ಮದ್ ಫ಼ಾರೂಕ್ ಅಲಿ, ಸಂಶೀರ್ ಮುಹಮ್ಮದ್, ಇಬ್ರಾಹೀಂ ನೌರೀಶ್, ಕೆ.ಎಚ್.ಮುಹಮ್ಮದ್ ರಫೀಕ್ ಸೂರಿಂಜೆ, ಶಮೀನ್ ಅಹ್ಮದ್, ಮುಹಮ್ಮದ್ ಫ಼ಾರೂಕ್, ಮುಹಮ್ಮದ್ ಮುಬೀನ್ ಇಸ್ಮಾಯೀಲ್, ಅಬ್ದುಲ್ ಬಶೀರ್ ಮುಹಮ್ಮದ್, ಇಸ್ಮಾಯೀಲ್ ಹಮೀದ್ ಮತ್ತು ದಾನಿಶ್ ಅಹ್ಮದ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News