ಡಿ.19ಕ್ಕೆ ಐಪಿಎಲ್ ಆಟಗಾರರ ಹರಾಜು

Update: 2019-12-16 18:46 GMT

 ಕೋಲ್ಕತಾ, ಡಿ .16: 2020ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ಗಾಗಿ ವಿವಿಧ ಫ್ರಾಂಚೈಸಿ ತಂಡಗಳ ಸೇರ್ಪಡೆಗೆ ಆಟಗಾರರ ಹರಾಜು ಪ್ರಕ್ರಿಯೆಯು ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿದ್ದು , ಐವರು ವಿದೇಶಿ ಆಟಗಾರರು ಹರಾಜಿನಲ್ಲಿ ಭಾರೀ ಮೊತ್ತಕ್ಕೆ ವಿವಿಧ ತಂಡಗಳಿಗೆ ಸೇರ್ಪಡೆಯಾಗುವುದನ್ನು ನಿರೀಕ್ಷಿಸಲಾಗಿದೆ.

ಈ ಬಾರಿ ಹರಾಜಿನ ಕಣದಲ್ಲಿ 332 ಆಟಗಾರರು ಇದ್ದಾರೆ. ತಂಡವೊಂದಕ್ಕೆ ಗರಿಷ್ಠ ನಾಲ್ವರು ಆಟಗಾರರ ಸೇರ್ಪಡೆಗೆ ಅವಕಾಶ ಇದೆ.

ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯವಿರುವ ಆಟಗಾರರಿಗೆ ಹೆಚ್ಚಿನ ಬೇಡಿಕೆ ಕಂಡು ಬರಲಿದೆ.

ದೊಡ್ಡ ಮೊತ್ತಕ್ಕೆ ಹರಾಜಾಗಲಿರುವ ವಿದೇಶಿ ಆಟಗಾರರ ವಿವರ ಇಂತಿವೆ.

ಜೇಸನ್ ರಾಯ್: ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಈ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ್ದರು. ಬಳಿಕ ಗುಜರಾತ್ ಲಯನ್ಸ್ ಸೇರ್ಪಡೆಗೊಂಡರೂ ಅಲ್ಲಿ ಅಷ್ಟೇನೂ ಮಿಂಚಲಿಲ್ಲ. ಆದಾಗ್ಯೂ, ಅವರು ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ಪ್ರಮುಖ ಭಾಗವಾಗಿದ್ದರು ಮತ್ತು ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಗಮನಸೆಳೆದಿರುವ ಓಪನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ

29 ವರ್ಷ ವಯಸ್ಸಿನ ರಾಯ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಅನೇಕ ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ.

 ಸ್ಯಾಮ್ ಕರ್ರನ್: ಇವರ ಹಿರಿಯ ಸಹೋದರ ಟಾಮ್ ವಿವಿಧ ಟಿ 20 ಲೀಗ್‌ಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಾರೆ ಮತ್ತು ಸ್ಯಾಮ್ ಕಳೆದ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ. ಪಂದ್ಯಾವಳಿಯ 2019 ರ ಆವೃತ್ತಿಯಲ್ಲಿ ಕರ್ರನ್ 9 ಪಂದ್ಯಗಳಿಂದ 172.72 ಸ್ಟ್ರೈಕ್‌ರೇಟ್‌ನಲ್ಲಿ 95 ರನ್ ಗಳಿಸಿದ್ದರು ಮತ್ತು 19.80 ಸ್ಟ್ರೈಕ್‌ರೇಟ್‌ನಲ್ಲಿ 10 ವಿಕೆಟ್ ಪಡೆದಿದ್ದರು. 21ರ ಹರೆಯದ ಕರ್ರನ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಯೋಗ್ಯವಾದ ಕೆಲಸವನ್ನು ಮಾಡಲು ಸಮರ್ಥರಾಗಿದ್ದಾರೆ. ಅವರನ್ನು ಸೇರಿಸಿಕೊಳ್ಳಲು ವಿವಿಧ ತಂಡಗಳು ಸ್ಪರ್ಧೆಗಿಳಿಯುವುದನ್ನು ನಿರೀಕ್ಷಿಸಲಾಗಿದೆ.

       

ಶೆಲ್ಡನ್ ಕಾಟ್ರೆಲ್: ಕಾಟ್ರೆಲ್ ಇತ್ತೀಚಿನ ದಿನಗಳಲ್ಲಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ವಿಶ್ವಾಸಾರ್ಹ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಮತ್ತು ಹಳೆಯ ಚೆಂಡಿನೊಂದಿಗೆ ಪರಿಣಾಮಕಾರಿಯಾಗಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಎಡಗೈ ವೇಗದ ಬೌಲರ್ ಎಕ್ಸ್‌ಪ್ರೆಸ್ ವೇಗವನ್ನು ಹೊಂದಿಲ್ಲ. ಆದರೆ ಅವರ ಗುರಿ ಅಷ್ಟೇ ಪರಿಣಾಮಕಾರಿಯಾಗಿದೆ. ಅವರ ಯಾರ್ಕರ್ ಉತ್ತಮವಾಗಿದೆ. 30ರ ಹರೆಯದ ಕಾಟ್ರೆಲ್ ಇದೇ ಮೊದಲ ಬಾರಿ ಐಪಿಎಲ್ ಪ್ರವೇಶಿಸುತ್ತಿದ್ದಾರೆ. ಆದರೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಮತ್ತು ಅವರು ಯಾವ ತಂಡವನ್ನು ಸೇರಿಕೊಂಡರೂ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕ್ರಿಸ್ ಲಿನ್: ಆಸ್ಟ್ರೇಲಿಯದ ಹಾರ್ಡ್ ಹಿಟ್ಟರ್ ಐಪಿಎಲ್‌ನಲ್ಲಿ ಈತನಕ ಯಶಸ್ವಿಯಾಗಲಿಲ್ಲ. ಆದರೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮಿಂಚಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಫಾರ್ಮ್ ಅಥವಾ ಫಿಟ್ನೆಸ್ ಸಮಸ್ಯೆಗಳಿಂದಾಗಿ ಮಿಂಚಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ, ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುವುದಾಗಿ ಇತ್ತೀಚೆಗೆ ಘೋಷಿಸಿದ ಬಳಿಕ ಅವರ ಬಗ್ಗೆ ಫ್ರಾಂಚೈಸಿ ತಂಡಗಳು ಆಸಕ್ತಿ ವಹಿಸಿವೆ.

ಖಾರಿ ಪಿಯರ್: ಸಾಗರೋತ್ತರ ಎಡಗೈ ವೇಗದ ಬೌಲರ್‌ನ್ನು ಹೊಂದಿರುವುದು ಅನೇಕ ಫ್ರಾಂಚೈಸಿಗಳಿಗೆ ತಕ್ಷಣದ ಕಾಳಜಿಯ ಕ್ಷೇತ್ರವಾಗಿರದೆ ಇರಬಹುದು. ಆದರೆ ಪಿಯರ್ ಅವರ ವೈಟ್-ಬಾಲ್ ಸಾಧನೆ ಸಮರ್ಥಿಸುವಷ್ಟು ಪ್ರಭಾವಶಾಲಿಯಾಗಿದೆ.

  ಅವರು 2018 ರ ಸಿಪಿಎಲ್ ಫೈನಲ್‌ನಲ್ಲಿ ಆಡಿದ್ದರು. ಕಳೆದ ಎರಡು ವರ್ಷಗಳಿಂದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

 ಪರಿಸ್ಥಿತಿಗೆ ತಕ್ಕಂತೆ ಅವರು ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡಲು ಸಮರ್ಥರಾಗಿದ್ದಾರೆ. ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News