ಜುಬೈಲ್: ಹಿದಾಯ ಚಾಂಪಿಯನ್ಸ್ ಲೀಗ್ ಟ್ರೋಫಿ ಅನಾವರಣ

Update: 2019-12-19 04:39 GMT

ಜುಬೈಲ್,ಡಿ.19: ಹಿದಾಯ ಫೌಂಡೇಶನ್, ಜುಬೈಲ್ ಘಟಕದ ವತಿಯಿಂದ ಮುಂದಿನ ತಿಂಗಳು ಇಲ್ಲಿ ನಡೆಯಲಿರುವ ಹಿದಾಯ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಟ್ರೋಫಿ ಮತ್ತು ಹಿದಾಯ ವಿಶೇಷ ಮಕ್ಕಳ ಆರೈಕೆ ಕೇಂದ್ರದ ಕಿರುಚಿತ್ರ ಬಿಡುಗಡೆ ಸಮಾರಂಭ ಡಿ.14ರಂದು ಇಲ್ಲಿನ  ರೆಸ್ಟೋರೆಂಟ್ ವೊಂದರಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಜುಬೈಲ್ ಘಟಕದ ಅಧ್ಯಕ್ಷ ಅಸಿಸ್ಕೊ ಮಾಲಕ ಉಮರ್ ಫಾರೂಕ್ ವಹಿಸಿದ್ದರು.  

ಎನ್.ಜಿ.ಸಿ. ಕಂಪೆನಿಯ  ಸಿಇಒ ಇಮ್ತಿಯಾಝ್ ಹಿದಾಯ ವಿಶೇಷ ಮಕ್ಕಳ ಆರೈಕೆ ಕೇಂದ್ರದ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು.

ಜಮೀಯ್ಯತುಲ್ ಫಲಾಹ್ ದಮ್ಮಾಮ್ ಯೂನಿಟ್ ಅಧ್ಯಕ್ಷ ಕಬೀರ್ ಲಕ್ಕಿಸ್ಟಾರ್, ಜಮೀಯ್ಯತುಲ್ ಫಲಾಹ್ ಜುಬೈಲ್ ಘಟಕದ ಅಧ್ಯಕ್ಷ ಫಾರೂಕ್ ಪೋರ್ಟ್ ಫೋಲಿಯೋ, ರಿಯಲ್ ಟೆಕ್ ಸಿಇಒ ಇಸ್ಮಾಯೀಲ್, ಎನ್ ಜಿ ಸಿಯ ಇಮ್ತಿಯಾಝ್ ಮತ್ತು ನಕೀಲ್ ರೂಫ್-ಟೆಕ್ ಹಿದಾಯ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಅನಾವರಣ ಗೊಳಿಸಿದರು.

 ಹಿದಾಯ ಫೌಂಡೇಶನ್ ಉಪಾಧ್ಯಕ್ಷ   ಆಸಿಫ್ ಡೀಲ್ಸ್, ಹಿದಾಯ ಫೌಂಡೇಶನ್ ದಮ್ಮಾಮ್ ಘಟಕದ ಅಧ್ಯಕ್ಷ ಅಮ್ಜದ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸಮಾರಂಭದಲ್ಲಿ ಹಿದಾಯ ವಿಶೇಷ ಮಕ್ಕಳನ್ನು ದತ್ತು ಪಡೆದ 21 ದಾನಿಗಳಿಗೆ ಸ್ಮರಣಿಕೆ ವಿತರಿಸಲಾಯಿತು.

ಅಖಿಲ್ ಸಿದ್ದೀಕ್ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ದಾನಿಶ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಚ್ ಎಫ್ ಜುಬೈಲ್ ಘಟಕದ ಉಪಾಧ್ಯಕ್ಷ ಶಮೀರ್ ವಂದಿಸಿದರು.

ಬೈಕಂಪಾಡಿ  ಜುಮಾ ಮಸ್ಜಿದ್ ನ ಮಾಜಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಚಿಕ್ಕಮಗಳೂರಿನ ಎಚ್ ಎಂ.ಎಸ್.ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿದಾಯ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯು ಜನವರಿ 16, 17 ಮತ್ತು  23, 24ರಂದು ಜುಬೈಲ್ ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News