ಪ್ರಧಾನಿಯವರೇ, 6000 ಮುಸ್ಲಿಂ ಧರ್ಮಗುರುಗಳು ಭಯೋತ್ಪಾದನೆ ವಿರುದ್ಧ ಫತ್ವಾ ನೀಡಿದ್ದು ನಿಮಗೆ ಗೊತ್ತಿದೆಯೇ?

Update: 2019-12-22 12:00 GMT

ರವಿವಾರ ರಾಮ್ ಲೀಲಾ ಮೈದಾನದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಒಂದು ಸಮುದಾಯವನ್ನು 'ಇವರ' ಎಂದು ಹೇಳಿ ಸಂಭೋದಿಸಿದ್ದಾರೆ. 'ಇವರ' ಕೈಯಲ್ಲಿ ತ್ರಿವರ್ಣ ಧ್ವಜ ನೋಡಿ ನೆಮ್ಮದಿಯಾಯಿತು, ಯಾವಾಗಲಾದರೂ ಇದೇ ತ್ರಿವರ್ಣ ಧ್ವಜ ಹಿಡಿದುಕೊಂಡು 'ಇವರು' ಭಯೋತ್ಪಾದನೆ ವಿರುದ್ಧವೂ ಮಾತಾಡಬಹುದು ಎಂದು ಹೇಳಿದ್ದಾರೆ. 

ಹೀಗೆ ಹೇಳುವ ಕೆಲವೇ ನಿಮಿಷಗಳ ಮೊದಲು ಪ್ರಧಾನಿ ಧರ್ಮದ ಆಧಾರದಲ್ಲಿ ನಾವು ವಿಭಜನೆ ಮಾಡುವುದಿಲ್ಲ ಎಂದೂ ಹೇಳುತ್ತಾರೆ. ಆದರೆ ಕಳೆದ ವಾರವಷ್ಟೇ ಜಾರ್ಖಂಡ್ ನಲ್ಲಿ ಉಡುಗೆಗಳ ಆಧಾರದಲ್ಲಿ ಗುರುತಿಸುವ ಮಾತಾಡಿದ್ದರು ಪ್ರಧಾನಿ. ಇಂದು ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಮತ್ತೆ ಒಂದು ಸಮುದಾಯವನ್ನು ತೋರಿಸಿ "ಇವರ ಕೈಯಲ್ಲಿ ಯಾವತ್ತಾದರೂ ಭಯೋತ್ಪಾದನೆ ವಿರುದ್ಧವೂ ತ್ರಿವರ್ಣ ಧ್ವಜ ಹಾರಾಡಲಿ" ಎಂದು ಹೇಳಿದ್ದಾರೆ.  ಅವರ ಇವತ್ತಿನ ಭಾಷಣದ ಒಟ್ಟು ಸಾರ ಅದೇ. 

ಪ್ರಧಾನಿಯ ಭಾಷಣ ಕೇಳಿ ಜನರು ಚಪ್ಪಾಳೆ ತಟ್ಟುತ್ತಿದ್ದರು. ಆದರೆ 2008ರಲ್ಲಿ ದಾರುಲ್ ಉಲೂಮ್ ನೇತೃತ್ವದಲ್ಲಿ 6000 ಮುಸ್ಲಿಂ ಧರ್ಮಗುರುಗಳು ಭಯೋತ್ಪಾದನೆ ವಿರುದ್ಧ ಫತ್ವಾ ಜಾರಿ ಮಾಡಿದ್ದು ನಿಮಗೆ ಗೊತ್ತಿದೆಯೇ? ಅದೇ ವರ್ಷ ಇದೇ ರಾಮಲೀಲಾ ಮೈದಾನದಲ್ಲಿ ಭಯೋತ್ಪಾದನೆ ವಿರುದ್ಧ ಮುಸ್ಲಿಮರ ದೊಡ್ಡ ಸಮಾವೇಶ ನಡೆದಿತ್ತು. ಆಗ ಅಂತಹದೇ ಸಮಾವೇಶಗಳು ದೇಶದ ಸುಮಾರು 200 ನಗರಗಳಲ್ಲಿ ನಡೆದಿದ್ದವು. ಅವುಗಳಲ್ಲಿ ಹಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಭಾಗವಹಿಸಿದ್ದವು.

2015 ರಲ್ಲಿ ಸಿರಿಯಾದಲ್ಲಿ ಐಸಿಸ್ ಪ್ರಾಬಲ್ಯ ಹೆಚ್ಚಿದ್ದಾಗ ಭಾರತದ ಮುಸ್ಲಿಂ ಸಂಘಟನೆಗಳು 70 ಕ್ಕಿಂತ ಹೆಚ್ಚು ಸಮಾವೇಶಗಳನ್ನು ನಡೆಸಿ ಐಸಿಸ್ ಅನ್ನು ಖಂಡಿಸಿದವು.  

ಇವತ್ತು ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ತನ್ನ ಮಾತನ್ನು ಜನಸಾಮಾನ್ಯರು ಪರಿಶೀಲಿಸುವ ಗೊಡವೆಗೆ ಹೋಗದೆ ನಂಬುತ್ತಾರೆ ಎಂಬ ಭರವಸೆಯಿಂದ ಮಾತಾಡಿದ್ದಾರೆ. ಅವರು ಹೇಳಿದ್ದನ್ನು ಜನ ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಅವರಿಗಿದೆ. ಮಾಧ್ಯಮಗಳೂ ಪ್ರಧಾನಿ ಮಾತನ್ನು ಎಲ್ಲೆಡೆ ಹರಡಿ ಮುಸ್ಲಿಮರು ತ್ರಿವರ್ಣ ಧ್ವಜ ಹಿಡಿದುಕೊಂಡು ಭಯೋತ್ಪಾದನೆಯನ್ನು ವಿರೋಧಿಸುವುದಿಲ್ಲ ಎಂದು ಹೇಳುತ್ತಾರೆ. ಇದರ ಜೊತೆಗೆ ಕೊಟ್ಟಿರುವ ಮೂರೂ ಸುದ್ದಿಗಳನ್ನು ನೋಡಿ.

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News